alex Certify ಎಕಾನಮಿ ಕಾರ್‌ ಗಳಲ್ಲೂ 6 ಏರ್‌ ಬ್ಯಾಗ್‌ ಕಡ್ಡಾಯ…! ನಿಯಮ ಜಾರಿಗೆ ಕೇಂದ್ರದ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಕಾನಮಿ ಕಾರ್‌ ಗಳಲ್ಲೂ 6 ಏರ್‌ ಬ್ಯಾಗ್‌ ಕಡ್ಡಾಯ…! ನಿಯಮ ಜಾರಿಗೆ ಕೇಂದ್ರದ ಚಿಂತನೆ

ಎಕಾನಮಿ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಆಟೋಮೊಬೈಲ್ ಉದ್ಯಮದಲ್ಲಿ ಬಹಳಷ್ಟು ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸಚಿವ ನಿತಿನ್ ಗಡ್ಕರಿ ಅವರು ಎಕಾನಮಿ ಕಾರುಗಳ ತಯಾರಕರನ್ನು ಕುರಿತು “ಒಂದು ಕಂಪನಿಯು ಆ ಕಾರುಗಳನ್ನು ರಫ್ತು ಮಾಡುವಾಗ ಆರು ಏರ್‌ಬ್ಯಾಗ್‌ಗಳನ್ನು ಹಾಕುತ್ತದೆ ಆದರೆ ಸ್ಥಳೀಯರಿಗೆ ಅವುಗಳನ್ನು ತಯಾರಿಸುವಾಗ ನಾಲ್ಕು ಏರ್‌ ಬ್ಯಾಗ್ ಮಾತ್ರ ಹಾಕುತ್ತಾರೆ. ಇಲ್ಲಿನವರ ಪ್ರಾಣಕ್ಕೆ ಬೆಲೆಯಲ್ಲಿವೆ ಎಂದು ಪ್ರಶ್ನಿಸಿದ್ದರು.

ವಾಹನಗಳಿಗೆ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಪ್ರಕ್ರಿಯೆ ಈಗಾಗಲೇ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವರು ಆಗ ಹೇಳಿದ್ದರು.

ರಸ್ತೆ ಅಪಘಾತಗಳ ಕುರಿತು ಮಾತನಾಡಿರುವ ಗಡ್ಕರಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವಾಗಿದ್ದರೂ ಇನ್ನೂ ಸಾಕಷ್ಟು ಕೆಲಸಗಳಿವೆ. ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳಿಂದ 1,50,000 ಸಾವುಗಳು ಸಂಭವಿಸುತ್ತಿವೆ. ಇದರಲ್ಲಿ ಶೇಕಡಾ 65 ರಷ್ಟು ಸಾವುಗಳು 18-34 ವಯೋಮಾನದವರಾಗಿದ್ದಾರೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...