ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಮೂವರು ಮಹಿಳೆಯರು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಡ್ಸ್ ಆಫ್ ಮುಂಬೈ ಪೇಜ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ 31 ಸೆಕೆಂಡ್ ವೀಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಮತ್ತು 800ಕ್ಕೂ ಹೆಚ್ಚು ರಿಟ್ವೀಟ್ ಗಳನ್ನು ಗಳಿಸಿದೆ.
ವೀಡಿಯೋದಲ್ಲಿ, ಕಿಕ್ಕಿರಿದ ಸ್ಥಳೀಯ ರೈಲಿನಲ್ಲಿ ಮೂವರು ಮಹಿಳೆಯರು ಜಗಳವಾಡುವುದನ್ನು ಮತ್ತು ಪರಸ್ಪರ ಕೂದಲನ್ನು ಎಳೆಯುವುದನ್ನು ಕಾಣಬಹುದು. ಹುಡುಗಿಯೊಬ್ಬಳು ವಯಸ್ಸಾದ ಮಹಿಳೆಯನ್ನು ಕಪಾಳಮೋಕ್ಷ ಮಾಡುವುದರೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ, ಮೂರನೇ ಮಹಿಳೆ ಮಧ್ಯೆ ಪ್ರವೇಶಿಸಿದ್ದಾಳೆ ಮತ್ತು ಹುಡುಗಿಯನ್ನು ಹೊಡೆಯಲು ಪ್ರಾರಂಭಿಸಿದ್ದಾಳೆ.
ರೈಲಿನಲ್ಲಿದ್ದ ಪ್ರಯಾಣಿಕರು ಮೂವರನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಒಬ್ಬ ಸಹ ಪ್ರಯಾಣಿಕ “ಅರೇ ಆಂಟಿ ಛೋಡೋ” ಎಂದು ಕೂಗಿದ್ದಾನೆ. ಇತರ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ.