ಹಾವುಗಳನ್ನು ಕಂಡರೆ ಅನೇಕ ಜನರಿಗೆ ಕೆಟ್ಟ ಭಯ. ಅದು ದಾಳಿ ಮಾಡಬೇಕೆಂದೇನಿಲ್ಲ, ತೆವಳಿ ಸಾಗುವುದು ಕಂಡರೂ ಭಯ ಬೀಳುತ್ತಾರೆ. ಇದೀಗ ವೈರಲ್ ವೀಡಿಯೊದಲ್ಲಿ ಬೃಹತ್ ಹೆಬ್ಬಾವು ಮೆಟ್ಟಿಲುಗಳ ಹ್ಯಾಂಡ್ರೈಲ್‌ನ ಮೇಲೆ ತೆವಳುತ್ತಿರುವುದು ಎಂತವರನ್ನೂ ಗಾಬರಿ ಬೀಳಿಸುವಂತಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
“ಮಹಡಿ ಮೇಲೆ ತೆರಳಲು, ಪ್ರತಿ ಬಾರಿಯೂ ಮೆಟ್ಟಿಲುಗಳ ಅಗತ್ಯವಿಲ್ಲ” ಎಂದು ಶಿರ್ಷಿಕೆ ನೀಡಿರುವ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೊ ನೆಟ್ಟಿಗರಿಂದ ತ್ವರಿತ ಪ್ರತಿಕ್ರಿಯೆಗಳನ್ನು ಗಳಿಸಿತು. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 10ಕೆ ಮತ್ತು ನೂರಾರು ಲೈಕ್ ಮತ್ತು ಮರುಟ್ವೀಟ್‌ಗಳನ್ನು ಗಳಿಸಿತು. ಕ್ಯಾಮೆರಾದ ಹಿಂದಿದ್ದ ವ್ಯಕ್ತಿಯ ಧೈರ್ಯವನ್ನು ಕೆಲವರು ಉಲ್ಲೇಖಿಸಿದ್ದಾರೆ.
https://twitter.com/susantananda3/status/1581874119121199108?ref_src=twsrc%5Etfw%7Ctwcamp%5Etweetembed%7Ctwterm%5E1581874119121199108%7Ctwgr%5E6c715ae06f4cff85eacca63c9cb22ce388d9de56%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-huge-snake-python-crawling-up-stairs-handrail-will-scare-you-watch-video-5690172%2F