
ರಾಜಸ್ಥಾನದ ಅಲ್ವಾರ್ನಲ್ಲಿ ಕೋತಿಯ ಅಂತ್ಯಕ್ರಿಯೆ ನಡೆಸುವ ಮನಕಲಕುವ ಹೃದಯ ವಿದ್ರಾವಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿದೆ.
ವಿದ್ಯುತ್ ಸ್ಪರ್ಶದಿಂದ ಕೋತಿ ಗಾಯಗೊಂಡು ಸಾವನ್ನಪ್ಪಿತ್ತು. ಸ್ಥಳೀಯರು 5 ತಿಂಗಳ ಕೋತಿ ಮರಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಕೋತಿಯ ಶವಯಾತ್ರೆಯ ವಿಡಿಯೋ ಇದೀಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ದಹನಕ್ರಿಯೆಗಾಗಿ ಸ್ಥಳೀಯರು ಪ್ರಾಣಿಯನ್ನು ಮೆರವಣಿಗೆಯಲ್ಲಿ ಹೊತ್ತೊಯ್ದಿರುವುದನ್ನು ನೋಡಬಹುದು. ಮೃತ ಮಂಗದ ಗೌರವಾರ್ಥವಾಗಿ ಮೆರವಣಿಗೆಯ ಸಮಯದಲ್ಲಿ ಸಂಗೀತ ವಾದ್ಯಗಳನ್ನು ನುಡಿಸಲು ಬ್ಯಾಂಡ್ ಕೂಡಾ ಕರೆಸಲಾಗಿತ್ತು.
ಅದು ಗಾಯಗೊಂಡ ಸಂದರ್ಭದಲ್ಲಿ ಹತ್ತಿರದ ಪ್ರದೇಶದಲ್ಲಿ ಯಾವುದೇ ಪಶುವೈದ್ಯಕೀಯ ಚಿಕಿತ್ಸಾಲಯವಿಲ್ಲದ ಕಾರಣ ಚಿಕಿತ್ಸೆ ವಿಳಂಬವಾಗಿತ್ತು. ಸ್ಥಳೀಯರು ಆರೈಕೆ ನಂತರ ಮಂಗವನ್ನು ಕರೆತಂದಿದ್ದು, ರಾತ್ರಿಯಿಡೀ ನರಳಿ ಶನಿವಾರ ಬೆಳಿಗ್ಗೆ ಕೋತಿ ಸಾವನ್ನಪ್ಪಿದೆ.
ಕೋತಿಗೆ ಅಂತ್ಯಕ್ರಿಯೆಯನ್ನು ಆಯೋಜಿಸುವ ಹಿಂದಿನ ಕಾರಣವನ್ನು ಸ್ಥಳೀಯರಾದ ಸಿಂಗ್ ವಿವರಿಸಿದ್ದು, ಅಲ್ವಾರ್ನಲ್ಲಿರುವ ಹಿಂದೂ ಸಮುದಾಯವು ಕೋತಿಗಳ ಮೇಲೆ ಆಳವಾದ ನಂಬಿಕೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.