ಮನೆಯಲ್ಲಿದ್ದ ಮೂರು ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ತನ್ನ ಮಗಳು ಪ್ರಿಯಕರನೊಂದಿಗೆ ಓಡಿಹೋದ ನಂತರ ವ್ಯಕ್ತಿಯೊಬ್ಬ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ.
ಇಂತದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, 18 ವರ್ಷದ ಯುವತಿ ಹದಿನೈದು ದಿನಗಳ ಹಿಂದೆ ಪರಾರಿಯಾಗಿದ್ದು, ಆಕೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಹುಡುಗಿಯ ಮದುವೆ ಅಕ್ಟೋಬರ್ 15 ರಂದು ಅವಳ ಹೆತ್ತವರ ಆಯ್ಕೆಯ ಹುಡುಗನೊಂದಿಗೆ ನಡೆಯಬೇಕಿತ್ತು. ಈ ಹಿನ್ನಲೆಯಲ್ಲಿ ಪಂಚಾಯಿತಿ ಮುಖಂಡರ ಮೂಲಕ ಯುವತಿ ಪ್ರಿಯಕರನ ಮನೆಯವರ ಸಹಕಾರ ಪಡೆದು ಇಬ್ಬರನ್ನೂ ಹುಡುಕಲು ಪ್ರಯತ್ನಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾಪತ್ತೆಯಾಗಿದ್ದ ಬಾಲಕಿಯ ತಂದೆ, ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಘಟನೆ ಕುರಿತಂತೆ ಮಾತನಾಡಿರುವ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಂದ್ರ ಸಿಂಗ್ ಪುಂಡೀರ್, “ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಬಾಲಕಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.