ಕಾಬೂಲ್: ತಾಲಿಬಾನ್ ಉಗ್ರರ ಸರ್ಕಾರ ಕಲ್ಲಿನಿಂದ ಹೊಡೆದು ಕೊಲ್ಲಲು ಆದೇಶ ನೀಡಿದ್ದಕ್ಕೆ ಹೆದರಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ವಿವಾಹಿತ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಮಹಿಳೆಯನ್ನು ಸರ್ಕಾರ ಸೆರೆಹಿಡಿದು ಶಿಕ್ಷೆ ವಿಧಿಸಲು ಮುಂದಾಗಿತ್ತು. ಇಸ್ಲಾಂ ಧರ್ಮದ ಪ್ರಕಾರ ಮಹಿಳೆ ವಿವಾಹಿತ ವ್ಯಕ್ತಿಯೊಂದಿಗೆ ಓಡಿ ಹೋಗಿರುವುದು ಘೋರ ಅಪರಾಧ ಎಂದು ಸರ್ಕಾರ ಭಾವಿಸಿ ಆಕೆಗೆ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಕಲ್ಲಿನಿಂದ ಹೊಡೆದು ಕೊಲ್ಲಲು ಆದೇಶ ಮಾಡಿದೆ.
ತಾಲಿಬಾನಿ ಉಗ್ರರ ಸರ್ಕಾರದ ಈ ಆದೇಶ ಅಕ್ಟೋಬರ್ 13ರಂದು ಜಾರಿಯಾಗಿ ಮಹಿಳೆಗೆ ಕಲ್ಲೇಟಿನ ಶಿಕ್ಷೆ ನೀಡಬೇಕಿತ್ತು. ಕಲ್ಲೇಟಿನ ಶಿಕ್ಷೆಗೆ ಬೆದರಿದ ಮಹಿಳೆ ತಾಲಿಬಾನಿ ಸೇನೆಯ ಎದುರಲ್ಲೇ ತಾನು ಧರಿಸಿದ್ದ ವೇಲ್ ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.