ಭೂತಾನ್ ಅಡಿಕೆ ಅಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಕುಸಿತವಾಗಬಹುದು ಎಂಬ ಭೀತಿ ಬೆಳೆಗಾರರನ್ನು ಕಾಡುತ್ತಿದ್ದು, ಇದರ ಮಧ್ಯೆ ಅಡಕೆಗೆ ಕಾಣಿಸಿಕೊಂಡಿರುವ ಎಲೆ ಚುಕ್ಕಿ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಅಗತ್ಯ ಪ್ರಮಾಣದ ಬಿಸಿಲು ಅಡಿಕೆಗೆ ಸಿಗದ ಕಾರಣ ಎಲೆ ಚುಕ್ಕಿ ರೋಗ ಉಲ್ಬಣಗೊಳ್ಳುತ್ತಿದೆ ಎನ್ನಲಾಗಿದ್ದು, ಇದರ ಪರಿಣಾಮ ಫಸಲು ಕೂಡ ಕಡಿಮೆಯಾಗತೊಡಗಿದೆ.
ದೇಶದಲ್ಲಿ ಬೆಳೆಯುವ ಅಡಿಕೆ ಪೈಕಿ ಕರ್ನಾಟಕ ಮತ್ತು ಕೇರಳದಿಂದಲೇ ಶೇಕಡ 70ರಷ್ಟು ಪಾಲು ಇದ್ದು, ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಭತ್ತ ತೆಗೆದು ವ್ಯಾಪಕ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಇದರ ಮಧ್ಯೆ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡಿಕೆಯ ಎಲೆ ಚುಕ್ಕಿ ರೋಗ ಮತ್ತಷ್ಟು ವ್ಯಾಪಿಸುವಂತೆ ಮಾಡುತ್ತಿದೆ.