ಮುಂಬೈ: ಸಂತ್ರಸ್ತೆಯೊಂದಿಗೆ ಮದುವೆಯ ಷರತ್ತು ವಿಧಿಸಿ ಅತ್ಯಾಚಾರಿಗೆ ಹೈಕೋರ್ಟ್ ಜಾಮೀನು ನೀಡಿದೆ. ನಾಪತ್ತೆಯಾದ ಸಂತ್ರಸ್ತೆಯನ್ನು ಒಂದು ವರ್ಷದೊಳಗೆ ಮದುವೆಯಾಗುವಂತೆ ಷರತ್ತು ವಿಧಿಸಿದ ಬಾಂಬೆ ಹೈಕೋರ್ಟ್ 26 ವರ್ಷದ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿದೆ.
ಒಂದು ವರ್ಷದೊಳಗೆ ಸಂತ್ರಸ್ತೆಯನ್ನು ಮದುವೆಯಾಗದಿದ್ದಲ್ಲಿ ಜಾಮೀನು ರದ್ದಾಗಲಿದೆ ಎಂದು ಕೋರ್ಟ್ ತಿಳಿಸಿದೆ. ಸಂತ್ರಸ್ತೆ ಮತ್ತು ಆರೋಪಿ ಪರಸ್ಪರ ಒಪ್ಪಿ ಲೈಂಗಿಕ ಸಂಪರ್ಕ ಹೊಂದಿದ್ದರು. ನಂತರ ಆರೋಪಿ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ನಡುವೆ ಮಗುವಿಗೆ ಜನ್ಮ ನೀಡಿದ ಯುವತಿ ನಾಪತ್ತೆಯಾಗಿದ್ದು, ಯುವಕ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯ ನಾಪತ್ತೆಯಾದ ಸಂತ್ರಸ್ತೆಯನ್ನು ಒಂದು ವರ್ಷದೊಳಗೆ ಮದುವೆಯಾಗುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.