ದೀಪಾವಳಿ ಹತ್ತಿರ ಬರ್ತಿದೆ. ಜನರು ಹಬ್ಬ ಆಚರಣೆಗೆ ತಯಾರಿ ನಡೆಸಿದ್ದಾರೆ. ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ತುಂಬ ಜನರು ದೀಪ ಬೆಳಗ್ತಾರೆ. ದೀಪಾವಳಿ ಸಂದರ್ಭದಲ್ಲಿ ಅನೇಕ ಪದ್ಧತಿಗಳು ಜಾರಿಯಲ್ಲಿವೆ. ದೀಪಾವಳಿ ದಿನ ಗೂಬೆಯನ್ನು ಬಲಿಕೊಡುವ ಪದ್ಧತಿಯಿದೆ. ಕೆಲವರು ದೀಪಾವಳಿ ದಿನ ಗೂಬೆ ಬಲಿ ನೀಡ್ತಾರೆ. ಗೂಬೆಯನ್ನು ತಾಯಿ ಲಕ್ಷ್ಮಿ ವಾಹನವೆಂದು ಹೇಳಲಾಗುತ್ತದೆ. ದೀಪಾವಳಿ ದಿನ ಗೂಬೆ ಕಣ್ಣಿಗೆ ಬಿದ್ರೆ ಶುಭವೆಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು ಗೂಬೆ ಬಲಿ ನೀಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬುತ್ತಾರೆ.
ಗೂಬೆಯನ್ನು ಬಲಿ ನೀಡಿದ್ರೆ ತಾಯಿ ಲಕ್ಷ್ಮಿ ಸಂತುಷ್ಟಳಾಗ್ತಾಳೆ. ಇದ್ರಿಂದ ಕೇಳಿದ ವರವನ್ನು ಭಕ್ತರಿಗೆ ನೀಡ್ತಾಳೆ ಎಂದು ಕೆಲವರು ನಂಬಿದ್ದಾರೆ. ದೀಪಾವಳಿಗೆ ಕೆಲವು ದಿನ ಇರುವಾಗ್ಲೇ ಜನರು ಗೂಬೆ ಖರೀದಿ ಶುರು ಮಾಡ್ತಾರೆ. ಬಲಿ ನೀಡುವ ಮೊದಲು ಗೂಬೆಗೆ ಮದ್ಯ ನೀಡಲಾಗುತ್ತದೆ. ನಂತ್ರ ಕಿವಿ, ಕಣ್ಣು, ರೆಕ್ಕೆಗಳನ್ನು ಕತ್ತರಿಸಲಾಗುತ್ತದೆ. ಇದ್ರ ಪೂಜೆ ಕೂಡ ನಡೆಯುತ್ತದೆ. ತಾಂತ್ರಿಕ ವಿದ್ಯೆ ಮಾಡುವವರು ಈ ಬಲಿ ವೇಳೆ ನಿರಂತರವಾಗಿ ಮಂತ್ರವನ್ನು ಜಪಿಸುತ್ತಾರೆ. ದೀಪಾವಳಿಯಲ್ಲಿ ಗೂಬೆ ಬಲಿ ನೀಡಿದ್ರೆ ಬಯಸಿದ್ದೆಲ್ಲ ಸಿಗುತ್ತದೆ ಎಂಬ ನಂಬಿಕೆ ಮೇಲೆ ಜನರು ಈ ಕೆಲಸ ಮಾಡ್ತಾರೆ.
ದೀಪಾವಳಿ ಸಂದರ್ಭದಲ್ಲಿ ಗೂಬೆಗಳ ಅಕ್ರಮ ಮಾರಾಟ ನಡೆಯುತ್ತದೆ. ಇದನ್ನು ತಡೆಯಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತದೆ. ಗೂಬೆ ಬಲಿ ನೀಡುವುದು ಕಾನೂನು ಬಾಹಿರ ಕೆಲಸವಾಗಿದೆ.