ಹೀಗೊಂದು ವಂಚನಾ ವಿಧಾನ; ಐಎಫ್ಎಸ್ ಅಧಿಕಾರಿಗೇ ಬಂತು ಕೆಲಸದ ಆಫರ್…! 17-10-2022 1:04PM IST / No Comments / Posted In: India, Featured News, Live News ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವನ್ಯಜೀವಿ ಪ್ರಿಯರಿಗೆ ಇಷ್ಟವಾಗುವ ವಿಷಯವನ್ನು ಸಾಮಾಜಿಕಜಾಲತಾಣದಲ್ಲಿ ಸದಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಸಾರ್ವಜನಿಕರನ್ನು ಎಚ್ಚರಿಸುವ ಸಂದೇಶ ಪೋಸ್ಟ್ ಮಾಡಿದ್ದಾರೆ. ಅವರು ತನಗೆ ರೂ 9,700 ಸಂಬಳದ ಉದ್ಯೋಗ ನೀಡುವುದಾಗಿ ಸ್ವೀಕರಿಸಿದ ಮೋಸದ ಸಂದೇಶದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ವಂಚನೆ ಸಂದೇಶಗಳ ಬಗ್ಗೆ ನೆಟ್ಟಿಗರನ್ನು ಎಚ್ಚರಿಸಲು ಮತ್ತು ಅಂತಹ ಬಲೆಗೆ ಬೀಳದಂತೆ ಎಚ್ಚರಿಸಲು ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ನಿಮ್ಮ ರೆಸ್ಯೂಮ್ ಅನ್ನು ನಮ್ಮ ಕಂಪನಿಯಲ್ಲಿ ಪರಿಶೀಲಿಸಲಾಗಿದೆ ಮತ್ತು ಸಂಬಳ ರೂ. 9,700” ಎಂದು ಟೆಕ್ಸ್ಟ್ ಇದೆ. ಅದಕ್ಕೆ ವಾಟ್ಸಪ್ ಲಿಂಕ್ ಕೂಡ ಲಗತ್ತಿಸಲಾಗಿತ್ತು. “ಆತ್ಮೀಯ ಸ್ನೇಹಿತರೇ, ಈ ದಿನಗಳಲ್ಲಿ ಅನೇಕ ಮೋಸಗಾರರು ಅಥವಾ ಏಜೆನ್ಸಿಗಳು ಈ ರೀತಿಯ ಎಸ್ಎಂಎಸ್ ಮತ್ತು ಇಮೇಲ್ಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅವುಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಇದು ಡೇಟಾ ಕಳ್ಳತನ, ಹ್ಯಾಕಿಂಗ್ ಅಥವಾ ಹಣಕಾಸಿನ ವಂಚನೆಗೆ ಕಾರಣವಾಗಬಹುದು.” ಎಂದು ಅಧಿಕಾರಿ ಎಚ್ಚರಿಸಿದ್ದಾರೆ. ಕಸ್ವಾನ್ ಅವರ ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ ಮತ್ತು ನೆಟ್ಟಿಗರಿಂದ ಪ್ರತಿಕ್ರಿಯೆಗಳು ಬಂದಿವೆ. ಅನೇಕರು ತಾವು ಸ್ವೀಕರಿಸಿದ ಸಂದೇಶಗಳ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. So many job offers.Choice is difficult.Especially, when it's not clear if salary mentioned is per month or per year.#FakeJob #JobScam https://t.co/2guiZ3fkO8 pic.twitter.com/4JiL2dM6tC — Susim Mohanty (@altertwit) October 16, 2022 @ParveenKaswan Sir : आज मेरा भी आ गया! Fun Fact : salary भी same offer कर रहे हैं https://t.co/dENxzjaRbJ pic.twitter.com/yN20Ap19R6 — Soumak Das (@SoumakDas89) October 15, 2022 How sad ! These types of fraud, scams activities are very common nowadays, but the sad part is there is no strong law/action from administration. Be alert while using internet, do not click or install any unknown link/app. https://t.co/HkBayqXCL6 pic.twitter.com/SBwUAevPS2 — Dhiraj Tiwari (@dhirajtt) October 13, 2022 Beware. https://t.co/yc6stlR46u — Vision Shares (@vision_shares) October 12, 2022