ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಕಂಟೆಂಟ್‌ಗಳು ಆಗಾಗ್ಗೆ ಬರುತ್ತಿರುತ್ತವೆ, ಜಾಲತಾಣಿಗರ ಮುಖದಲ್ಲಿ ನಗುವನ್ನು ಮೂಡಿಸುವಂತಹ ವೀಡಿಯೊ ಕಂಟೆಂಟ್‌ಗೇನು ಕಡಿಮೆ ಇರುವುದೇ ಇಲ್ಲ. ಈಗ ಬಂದಿರುವ ಕಂಟೆಂಟ್ ಅದೇ ಸಾಲಿಗೆ ಸೇರಿದೆ.
ತಿಂಗಳಿಗೊಮ್ಮೆ ಕ್ಷೌರಿಕನ ಬಳಿಗೆ ಹೋಗುವುದು ಕೆಲವರಿಗೆ ವಾಡಿಕೆ. ನೀವು ಕ್ಷೌರ ಮಾಡಿಸಿಕೊಂಡು ಹೊರಗೆ ಬರುವಾಗ ಹೇರ್ ಡ್ರೆಸರ್ ತಮ್ಮ ಗ್ರಾಹಕರ ಹಣೆಗೆ ಮುತ್ತು ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲೊಬ್ಬ ಮಹಾಶಯ ಗ್ರಾಹಕರ ಹಣೆಗೆ ಮುತ್ತಿಟ್ಟು ಕಳಿಸುತ್ತಾನೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಪ್ಯೂಬಿಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಮೂಲತಃ ಬ್ರಿಯಾನ್ ಎಂಬ ಹೇರ್ ಡ್ರೆಸರ್ ಹಂಚಿಕೊಂಡಿದ್ದಾರೆ.
ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ ಬ್ರಿಯಾನ್ ತನ್ನ ಗ್ರಾಹಕರಿಗೆ ಅವರ ಹಣೆಯ ಮೇಲೆ ಸ್ವೀಟ್ ಕಿಸ್ ನೀಡುವುದನ್ನು ಕಾಣಬಹುದು.
ಜಾಲತಾಣದಲ್ಲಿ ಈ ವೀಡಿಯೊ 10.1 ಮಿಲಿಯನ್ ವೀಕ್ಷಣೆ ಗಳಿಸಿದೆ. ಕ್ಲಿಪ್ ಅನ್ನು ವೀಕ್ಷಿಸಿದ ನಂತರ ನೆಟ್ಟಿಗರು ಖುಷಿಗೊಂಡು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಹರಿಸಿದ್ದಾರೆ.
https://youtu.be/KkoaB7MvWhk