ಬೆಂಗಳೂರು: ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿಗಳೇ ಸಿಡಿದೆದ್ದಿದ್ದಾರೆ. ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನು ತಡ ರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ಇದರಿಂದ ನಮಗೆ ಕುಟುಂಬದ ಜೊತೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ, ನಿದ್ರಾಹೀನತೆಯಿಂದಾಗಿ ಮರೆವು ಸೇರಿದಂತೆ ಹಲವು ಕಾಯಿಲೆಗಳು ಬರುತ್ತಿವೆ ಎಂದು ಕಚೇರಿಯ 25ಕ್ಕೂ ಹೆಚ್ಚು ಎಫ್ ಡಿಎ, ಎಸ್ ಡಿಎ ಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ.
ಸಾಮಾನ್ಯ ವಿಷಯಗಳನ್ನು ದೊಡ್ಡದಾಗಿ ಮಾಡಿ ಕಾನೂನು ಬಾಹಿರವಾಗಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ. 25 ಸಿಬ್ಬಂದಿಗಳಿಗೆ ಬಡ್ತಿಯನ್ನೂ ತಡೆ ಹಿಡಿಯಲಾಗಿದೆ. ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಕನ್ನಡದಲ್ಲಿ ಮಾತನಾಡುವ ಸಿಬ್ಬಂದಿಗಳನ್ನು ತುಚ್ಛವಾಗಿ ಕಾಣುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.