alex Certify ಉದ್ಯೋಗಿಗಳಿಗೆ ಜುವೆಲರ್ ಶಾಪ್ ಮಾಲೀಕನಿಂದ ಬಂಪರ್ ಗಿಫ್ಟ್; ದೀಪಾವಳಿ ಅಂಗವಾಗಿ ಕಾರು – ಬೈಕುಗಳನ್ನು ನೀಡಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಜುವೆಲರ್ ಶಾಪ್ ಮಾಲೀಕನಿಂದ ಬಂಪರ್ ಗಿಫ್ಟ್; ದೀಪಾವಳಿ ಅಂಗವಾಗಿ ಕಾರು – ಬೈಕುಗಳನ್ನು ನೀಡಿದ ಉದ್ಯಮಿ

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಹೌದು ತಮಿಳುನಾಡಿನ ಚೆನ್ನೈನಲ್ಲಿ ಜುವೆಲರ್ ಶಾಪ್ ಹೊಂದಿರುವ ಜಯಂತಿ ಲಾಲ್, ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಅಂಗವಾಗಿ ಕಾರು ಹಾಗೂ ಬೈಕುಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ.

10 ಮಂದಿ ಉದ್ಯೋಗಿಗಳಿಗೆ ಕಾರ್ ನೀಡಲಾಗಿದ್ದರೆ, 20 ಉದ್ಯೋಗಿಗಳಿಗೆ ಬೈಕುಗಳನ್ನು ಕೊಡಲಾಗಿದೆ. ಈ ಕುರಿತಂತೆ ಮಾತನಾಡಿರುವ ಜಯಂತಿ ಲಾಲ್, ನನ್ನ ಏಳುಬೀಳು ನಡುವೆಯೂ ಉದ್ಯೋಗಿಗಳು ನನಗೆ ಸಾಥ್ ನೀಡಿದ್ದಾರೆ. ಅವರ ಶ್ರಮದ ಕಾರಣಕ್ಕಾಗಿಯೇ ನಾನು ಇಂದು ಈ ಸ್ಥಾನ ತಲುಪಿದ್ದೇನೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಉಡುಗೊರೆ ನೀಡಿದ್ದೇನೆ ಎಂದಿದ್ದಾರೆ.

— ANI (@ANI) October 17, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...