
ಇದು ಮೊಬೈಲ್ ಜಮಾನಾ. ಯುವ ಜನತೆಯಂತೂ ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಆಟ, ಊಟ, ಪಾಠ ಎಲ್ಲಾ ಸಮಯದಲ್ಲೂ ಮೊಬೈಲ್ ಬೇಕು. ಇದೆಲ್ಲಾ ಹಾಗಿರ್ಲಿ ಸ್ನಾನ ಅಥವಾ ಶೌಚಕ್ಕೆ ಹೋಗುವಾಗ್ಲೂ ಮೊಬೈಲ್ ಕೊಂಡೊಯ್ಯುತ್ತಾರೆ.
ಆದ್ರೆ ಎಚ್ಚರವಿರಲಿ, ಮೊಬೈಲ್ ಅನ್ನು ಬಾತ್ ರೂಮ್ ಗೆ ತೆಗೆದುಕೊಂಡು ಹೋದ್ರೆ ನೀವು ರೋಗಗಳಿಗೆ ಆಹ್ವಾನ ಕೊಟ್ಟಂತೆ. ಹಿಂದೆಲ್ಲಾ ಶೌಚಕ್ಕೆ ಹೋಗುವಾಗ ಜೊತೆಗೆ ದಿನಪತ್ರಿಕೆ ಕೊಂಡೊಯ್ಯುವ ಅಭ್ಯಾಸವಿತ್ತು. ಈಗ ಆ ಜಾಗಕ್ಕೆ ಮೊಬೈಲ್ ಬಂದಿದೆ. ಬಾತ್ ರೂಮಿಗೆ ಮೊಬೈಲ್ ಕೊಂಡೊಯ್ಯೋದ್ರಿಂದ ಅದು ನೀರಿನಲ್ಲಿ ಬೀಳುವ ಸಾಧ್ಯತೆ ಇರುತ್ತದೆ.
ಸ್ನಾನದ ಕೋಣೆಗಳಲ್ಲಿ ಕೀಟಾಣು ಮತ್ತು ಬ್ಯಾಕ್ಟೀರಿಯಾಗಳು ಅಪಾರ ಪ್ರಮಾಣದಲ್ಲಿರುತ್ತವೆ. ಅವು ಮೊಬೈಲ್ ಮೇಲೆ ಕುಳಿತುಕೊಳ್ಳುತ್ತವೆ. ನೀವು ಮೊಬೈಲ್ ಅನ್ನು ಬಾಯಿಯ ಸಮೀಪದಲ್ಲಿಟ್ಟುಕೊಂಡು ಮಾತನಾಡಿದಾಗ ನಿಮ್ಮ ದೇಹ ಸೇರಬಹುದು.
ಬಾತ್ ರೂಮಿನಲ್ಲಿ ನೀವು ಮುಟ್ಟಿದ ವಸ್ತುವಿನ ಮೇಲೆಲ್ಲಾ ಕೀಟಾಣುಗಳಿರುತ್ತವೆ. ನಂತರ ನೀವು ಕೈಗಳನ್ನೇನೋ ತೊಳೆದುಕೊಳ್ಳಬಹುದು. ಆದ್ರೆ ಮೊಬೈಲ್ ತೊಳೆಯಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಇನ್ಫೆಕ್ಷನ್ ಕೂಡ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸ್ನಾನದ ಕೋಣೆಗೆ ಮೊಬೈಲ್ ಕೊಂಡೊಯ್ಯುವ ಅಭ್ಯಾಸ ಬಿಟ್ಟು ಬಿಡಿ.