ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ವಿಶ್ವದ ಹಲವು ರಾಷ್ಟ್ರಗಳು ಇದನ್ನು ನಿಲ್ಲಿಸುವಂತೆ ಹೇಳಿದರೂ ಕಿವಿಗೊಟ್ಟಿಲ್ಲ. ಯುದ್ಧ ಇನ್ನೂ ಮುಂದುವರೆದಿರುವ ಮಧ್ಯೆ ವಿಶ್ವಸಂಸ್ಥೆಯ ವರದಿ ಒಂದರಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ವಯಾಗ್ರ ಸೇವಿಸಿದ ರಷ್ಯಾ ಯೋಧರು ನೂರಕ್ಕೂ ಅಧಿಕ ಅತ್ಯಾಚಾರಗಳನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
ಫೆಬ್ರವರಿಯಲ್ಲಿ ಯುದ್ಧ ಆರಂಭವಾದ ಬಳಿಕ ಈವರೆಗೆ ನೂರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಕಾಮೋತ್ತೇಜಕ ವಯಾಗ್ರ ಮಾತ್ರೆಗಳನ್ನು ಸೇವಿಸುವ ರಷ್ಯಾ ಸೈನಿಕರು, ಉಕ್ರೇನಿನ 4 ವರ್ಷದ ಮಕ್ಕಳಿಂದ ಹಿಡಿದು 82 ವರ್ಷದ ವೃದ್ಧೆಯರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಉಕ್ರೇನ್ ನಲ್ಲಿನ ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯದ ವಿಭಾಗದ ವಿಶೇಷ ಪ್ರತಿನಿಧಿ ಪ್ರಮೀಳಾ ಪ್ಯಾಟನ್ ಅವರು ಈ ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಿದ್ದು, ಯುದ್ಧದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸುವುದು ಕೂಡಾ ಪುಟಿನ್ ಸರ್ಕಾರದ ರಣನೀತಿ ಎಂದು ಆರೋಪಿಸಲಾಗಿದೆ. ಹೀಗಾಗಿಯೇ ಇದರ ಭಾಗವಾಗಿ ರಷ್ಯಾ ಸೈನಿಕರಿಗೆ ವಯಾಗ್ರ ಮಾತ್ರೆ ನೀಡಲಾಗುತ್ತಿದೆ ಎಂದು ಊಹಿಸಲಾಗಿದೆ.