alex Certify ಆರೋಗ್ಯದ ಜೊತೆ ರುಚಿಕರ ಸಲಾಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಜೊತೆ ರುಚಿಕರ ಸಲಾಡ್

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ ಈ ಬಾರಿ ರಷ್ಯನ್ ಸಲಾಡ್ ಮಾಡಿ ತಿನ್ನಿ.

ರಷ್ಯನ್ ಸಲಾಡ್ ಮಾಡಲು ಬೇಕಾಗುವ ಪದಾರ್ಥ:

2 ಕಪ್ ಫ್ರೆಂಚ್ ಬೀನ್ಸ್

2 ಕ್ಯಾರೆಟ್

ಹಸಿರು ಬಟಾಣಿ ಹಾಗೂ ಕತ್ತರಿಸಿ ಬೇಯಿಸಿದ ಆಲೂಗಡ್ಡೆ

½ ಕಪ್ ಅನಾನಸ್ ಹೋಳುಗಳು

½ ಕಪ್ ಕ್ರೀಂ

½ ಚಮಚ ಸಕ್ಕರೆ

ರುಚಿಗ ತಕ್ಕಷ್ಟು ಉಪ್ಪು ಮತ್ತು ಕರಿ ಮೆಣಸಿನ ಪುಡಿ.

ರಷ್ಯನ್ ಸಲಾಡ್ ಮಾಡುವ ವಿಧಾನ : ಒಂದು ಪ್ಯಾನ್ ನಲ್ಲಿ ಫ್ರೆಂಚ್ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ, ಆಲೂಗಡ್ಡೆಯನ್ನು ಹಾಕಿ. ಇದಾದ ನಂತ್ರ ಉಪ್ಪು, ಸಕ್ಕರೆ ಕರಿಮೆಣಸಿನ ಪುಡಿ ಹಾಕಿ. ನಂತ್ರ ತಾಜಾ ಕ್ರೀಂ ಹಾಕಿ. ನಂತ್ರ ಸುಮಾರು 1 ಗಂಟೆಯವರೆಗೆ ಫ್ರಿಜ್ ನಲ್ಲಿಡಿ. ಒಂದು ಗಂಟೆ ನಂತ್ರ ರುಚಿರುಚಿ ರಷ್ಯನ್ ಸಲಾಡ್ ಸವಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...