ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಖುಷಿಯಿಂದ ಕೂಡಿರಲೆಂದು ಬಯಸ್ತಾನೆ. ಇದಕ್ಕಾಗಿ ಪ್ರತಿಕ್ಷಣ ಆತ ಪ್ರಯತ್ನಪಡ್ತಾನೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಖುಷಿ, ಸಂತೋಷ, ಶಾಂತಿಯ ಕೊರತೆ ಕಾಡುತ್ತದೆ.
ಇಂತವರು ಪ್ರತಿದಿನ ಸ್ವಲ್ಪ ಸಮಯ ಹೊಂದಿಸಿಕೊಂಡು ಈ ಕೆಲಸಗಳನ್ನು ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಜೊತೆಗೆ ಕೌಟುಂಬಿಕ ಕಲಹ ದೂರವಾಗಿ ರೋಗಗಳಿಂದ ಬಿಡುಗಡೆ ಸಿಗುತ್ತದೆ.
ಕುಟುಂಬದ ಸದಸ್ಯರಲ್ಲಾಗುವ ವಾದ-ವಿವಾದಗಳು ಮನೆಯನ್ನು ಅಶಾಂತಿಗೊಳಿಸುತ್ತದೆ. ಸಣ್ಣಪುಟ್ಟ ಗಲಾಟೆ ದೊಡ್ಡ ಬಿರುಕಿಗೆ ಕಾರಣವಾಗುತ್ತದೆ.
ಮನೆಯಲ್ಲಿ ಸದಾ ಶಾಂತಿ ನೆಲೆಸಿರಬೇಕಾದಲ್ಲಿ ಪ್ರತಿದಿನ ಸೂರ್ಯೋದಯವಾಗುವ ಸಮಯದಲ್ಲಿ ಮನೆಯ ಎಲ್ಲ ಸದಸ್ಯರು ನೀರು ಕುಡಿಯುವ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಮನೆಯ ಪ್ರತಿಯೊಂದು ಕೋಣೆಗೂ ಪ್ರೋಕ್ಷಣೆ ಮಾಡಿ. ಹೀಗೆ ಮಾಡುವಾಗ ಮನೆಯ ಯಾವ ಸದಸ್ಯರ ಬಳಿಯೂ ಮಾತನಾಡಬೇಡಿ. ‘ಓಂ ಶಾಂತಿ ಓಂ’ ಮಂತ್ರವನ್ನು ಪಠಿಸಿ. ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣುವಿರಿ.
ದಾರಿಯಲ್ಲಿ ಮಂಗಳಮುಖಿ ಕಂಡರೆ ನಿಮ್ಮ ಶಕ್ತಿಗನುಸಾರವಾಗಿ ಹಣವನ್ನು ದಾನ ಮಾಡಿ. ಸಾಧ್ಯವಾದಲ್ಲಿ ಅವರಿಗೆ ಊಟ ಹಾಕಿ. ನಂತ್ರ ಅವರಿಂದ ಒಂದು ನಾಣ್ಯವನ್ನು ಪಡೆಯಿರಿ. ನೀವು ಕೊಟ್ಟ ಹಣವನ್ನೇ ವಾಪಸ್ ಪಡೆಯಬೇಡಿ. ಈ ನಾಣ್ಯವನ್ನು ಮನೆಯ ಕಪಾಟಿನಲ್ಲಿಡಿ. ಇದ್ರಿಂದ ಮನೆಯ ಆರ್ಥಿಕ ಸಮಸ್ಯೆ ದೂರವಾಗಲಿದೆ.
ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಹಾಲು ಹಾಗೂ ಕಪ್ಪು ಎಳ್ಳನ್ನು ಅರ್ಪಿಸಿ. ತಾಮ್ರದ ಪಾತ್ರೆ ಬದಲು ಬೇರೆ ಲೋಹದ ಪಾತ್ರೆಯಲ್ಲಿ ಹಾಲಿನ ಅಭಿಷೇಕ ಮಾಡಿ. ನಂತ್ರ ಆರೋಗ್ಯ ವೃದ್ಧಿಗೆ ಶಿವನಲ್ಲಿ ಪ್ರಾರ್ಥನೆ ಮಾಡಿ.
ಬೆಳಿಗ್ಗೆ ಎದ್ದು ನಿತ್ಯಕರ್ಮವನ್ನು ಮುಗಿಸಿ ಸ್ನಾನ ಮಾಡಿ ತುಳಸಿ ದೇವಿಗೆ ತುಪ್ಪದ ದೀಪವನ್ನು ಹಚ್ಚಬೇಕು. ನಂತ್ರ ವಿದ್ಯಾ-ಬುದ್ಧಿಯ ವೃದ್ಧಿಗೆ 108 ಬಾರಿ ತುಳಸಿ ಮಂತ್ರವನ್ನು ಜಪಿಸಬೇಕು.