ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಬಾಡಿಗೆ ತಾಯ್ತನ ಹೊಸ ಟ್ವಿಸ್ಟ್ ಗೆ ಸಾಕ್ಷಿಯಾಗಿದೆ. ಕಳೆದ ಭಾನುವಾರ ನಯನತಾರಾ ಮತ್ತು ವಿಘ್ನೇಶ್ ಅವರು ಅವಳಿ ಗಂಡುಮಕ್ಕಳ ಪೋಷಕರಾಗಿರುವುದಾಗಿ ಘೋಷಿಸಿದರು.
ದಂಪತಿಗಳು ದೃಢೀಕರಿಸದಿದ್ದರೂ, ಪ್ರಕ್ರಿಯೆಯಲ್ಲಿ ತೊಡಗಿರುವ ಸಂಭವನೀಯ ಬಾಡಿಗೆ ತಾಯ್ತನದ ಬಗ್ಗೆ ಭಾರಿ ಚರ್ಚೆಯಾಯಿಗಿ ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಅವರು ಮಕ್ಕಳನ್ನು ಸ್ವಾಗತಿಸಲು ಬಳಸುವ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿ ವಿಚಾರಣೆ ನಡೆಸುವುದಾಗಿಯೂ ಹೇಳಿದ್ದರು.
ಇದೀಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮಿಳುನಾಡು ಆರೋಗ್ಯ ಇಲಾಖೆಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಆರು ವರ್ಷಗಳ ಹಿಂದೆ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಅಫಿಡವಿಟ್ ಬಹಿರಂಗಪಡಿಸಿದೆ. ದಂಪತಿಗಳು ತಮ್ಮ ಮದುವೆಯ ದಾಖಲೆಗಳನ್ನು ಅಫಿಡವಿಟ್‌ನೊಂದಿಗೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಬಾಡಿಗೆ ತಾಯಿ ನಯನತಾರಾ ಅವರ ಸಂಬಂಧಿ ಎಂದು ದಂಪತಿಗಳು ಬಹಿರಂಗಪಡಿಸಿದ್ದಾರೆ. ಆಕೆ ಯುಎಇ ನಿವಾಸಿ ಎಂದು ಹೇಳಲಾಗಿದೆ. ಅವಳಿ ಮಕ್ಕಳು ಜನಿಸಿದ ಚೆನ್ನೈ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ ಎಂದೂ ಹೇಳಲಾಗುತ್ತಿದೆ.
2021 ರ ಬಾಡಿಗೆ ತಾಯ್ತನ ಕಾಯಿದೆಯ ಪ್ರಕಾರ, ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಲು ಬಯಸುವ ಯಾವುದೇ ದಂಪತಿಗಳು ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಮದುವೆಯಾಗಬೇಕು. ಬಾಡಿಗೆ ತಾಯಿ ಪೋಷಕರ ಹತ್ತಿರದ ಸಂಬಂಧಿಯಾಗಿರಬೇಕು. ಈ ನಿಯಮ ಗಮನಿಸಿದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಎಲ್ಲಾ ನಿಯಮಗಳನ್ನು ಅನುಸರಿಸಿದ್ದಾರೆ ಎನ್ನಲಾಗಿದೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.