ಬೆಂಗಳೂರು: ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಅರಮನೆ ಮೈದಾನದ ಗಾಯತ್ರಿ ಮೈದಾನದಲ್ಲಿ ನಡೆದಿರುವ ಸಮಾವೇಶದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ.
ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆಯಲ್ಲಿ ಸಚಿವ ನಾಗೇಶ್ ಪಕ್ಕದಲ್ಲಿ ಕುಳಿತುಕೊಂಡವರೊಂದಿಗೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಸಿಎಂ ಸಿಟ್ಟಾಗಿದ್ದಾರೆ. ನಾಗೇಶ್ ಮಾತನಾಡುತ್ತಿರುವುದನ್ನು ಕಂಡು ಸಿಟ್ಟಾದ ಅವರು, ನಾಗೇಶ್ ನಿಮಗೆ ಮಾತನಾಡಬೇಕು ಅಂದ್ರೆ ಹೊರಗೆ ಹೋಗಿ ಮಾತನಾಡಿ ಎಂದು ಗರಂ ಆಗಿದ್ದಾರೆ.