ಆನ್‌ಲೈನ್ ಹರಾಜು ಸೈಟ್‌ಗೆ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಾಕಿದ ನಂತರ ಆಕಸ್ಮಿಕವಾಗಿ ದುಬಾರಿ ಮಂಚವನ್ನು ಖರೀದಿಸಿದೆ ಎಂದು ಟಿಕ್‌ಟೋಕರ್ ತನ್ನ ದುಃಖದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ.
ಕ್ಯಾಲಿಫೋರ್ನಿಯಾ ಮೂಲದ ಟಿಕ್‌ಟಾಕ್ ತಾರೆಯೊಬ್ಬರು ಇದಕ್ಕಾಗಿ ಈಗ ವೈರಲ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಇತ್ತೀಚಿನ ಪೋಸ್ಟ್‌ನಲ್ಲಿ, 21 ವರ್ಷದ ಕ್ವೆನ್ಲಿನ್ ಬ್ಲ್ಯಾಕ್‌ವೆಲ್ ಆನ್‌ಲೈನ್ ಹರಾಜಿನಲ್ಲಿ ಆಕಸ್ಮಿಕವಾಗಿ $ 100,000 (ರೂ. 82 ಲಕ್ಷ) ಮೌಲ್ಯದ ಮಂಚವನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಈ ಸಾಲದಿಂದ ಪಾರಾಗಲು ಸಹಾಯ ಮಾಡಿ ಎಂದು ಅನುಯಾಯಿಗಳನ್ನು ಕೋರಿದ್ದಾಳೆ.
ಆನ್‌ಲೈನ್ ಹರಾಜು ಸೈಟ್‌ಗೆ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಾಕಿದ ನಂತರ ಆಕಸ್ಮಿಕವಾಗಿ ದುಬಾರಿ ಮಂಚವನ್ನು ಖರೀದಿಸಿದೆ ಎಂದು ಟಿಕ್‌ಟೋಕರ್ ತನ್ನ ದುಃಖದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಆದರೆ ಈಗ, ಮಂಚದ ವೆಚ್ಚವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾಳೆ, ಹೀಗಾಗಿ ತನ್ನ ಅನುಯಾಯಿಗಳಿಂದ ಸಹಾಯ ಪಡೆಯಲು ನಿರ್ಧರಿಸಿದ್ದಾರೆ.
ಯಾಕಂದರೆ ಆನ್ ಲೈನ್ ಸಂಸ್ಥೆ ಆಕೆಗೆ ಹಣವನ್ನು ಮರಳಿಸಲು ನಿರಾಕರಿಸಿದೆ. ಹೀಗಾಗಿ ಟಿಕ್ ಟಾಕ್ ತಾರೆ ಲಕ್ಷಾಂತರ ರೂಪಾಯಿಗಳ ಸಾಲಗಾರಳಾಗಿದ್ದು, ಇದರಿಂದ ಹೊರ ಬರಲು ನನಗೆ ಸಹಾಯ ಮಾಡಿ ಎಂದು ಅನುಯಾಯಿಗಳಿಗೆ ಕಣ್ಣೀರಿಟ್ಟು ಮನವಿ ಮಾಡಿದ್ದಾಳೆ.