ಬೆಂಗಳೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಹಲವರು ಮದ್ಯಪಾನಕ್ಕೆ ಅಡಿಕ್ಟ್ ಆಗಿರುತ್ತಾರೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅಭ್ಯಾಸ ದುರಭ್ಯಾಸವಾದರೆ ಅಪಾಯವೇ ಹೆಚ್ಚು…… ಇಂತಹ ಮದ್ಯಪಾನಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾವುದು ಉತ್ತಮ ? ಎಂಬ ಪ್ರಶ್ನೆಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಉತ್ತರ ನೀಡಿದ್ದಾರೆ.
ವೈನ್ ನಿಂದ ಸ್ಕಿನ್ ಗ್ಲೋ ಹೆಚ್ಚಾಗುತ್ತದೆ. ಹಾರ್ಟಿಗೆ ಉತ್ತಮ. ವಿಸ್ಕಿಯಿಂದ ಕೊಲೆಸ್ಟ್ರಾಲ್ ಲೆವಲ್ ಕಡಿಮೆಯಾಗುತ್ತದೆ ಎಂಬ ಕೆಲವು ಆರ್ಟಿಕಲ್ ಗಳು ಇತ್ತೀಚೆಗೆ ಗಮನ ಸೆಳೆಯುತ್ತಿರುತ್ತದೆ. ಇದು ನಿಜವೇ ? ವಿಸ್ಕಿ, ಬ್ರಾಂದಿ, ವೈನ್, ಬಿಯರ್, ರಮ್ ಇವುಗಳಲ್ಲಿ ಆರೋಗ್ಯಕರವಾದದ್ದು ಯಾವುದು ? ಆಲ್ಕೋಹಾಲ್ ನಲ್ಲಿ ಆರೋಗ್ಯಕ್ಕೆ ಅಪಾಯವಾದ ಅಂಶಗಳು ಯಾವುದು ? ಆರೋಗ್ಯಕರ ಅಂಶ ಹೆಚ್ಚು ಇರುವುದು ಯಾವುದರಲ್ಲಿ ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಡಾ. ರಾಜು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಆಲ್ಕೋಹಾಲ್ ಅಥವಾ ಮದ್ಯಪಾನ ಎಂದರೆ E thanol- ಇದೊಂದು ಕೆಮಿಕಲ್. ಹಣ್ಣು, ತರಕಾರಿ, ಬೇಳೆ ಇವುಗಳ ಫರ್ಮಂಟೇಶನ್ ರೂಪ ಆಲ್ಕೋಹಾಲ್ ಆಗಿ ಪರಿಣಮಿಸುತ್ತದೆ. ಪ್ರತಿಯೊಂದು ಮದ್ಯದಲ್ಲಿಯೂ ಇಥನಾಲ್ ಕೆಮಿಕಲ್ ಇದ್ದೇ ಇರುತ್ತದೆ. ಆದರೆ ಅದರ ಪ್ರಮಾಣ ಮಾತ್ರ ಬೇರೆ ಬೇರೆಯಾಗಿರುತ್ತದೆ. ಆಲ್ಕೋಹಾಲ್ ನಲ್ಲಿರುವ ಕಂಜಿನರ್ಸ್ ನಿಂದಾಗಿ ಮದ್ಯಸೇವನೆಯ ನಂತರದ ಪರಿಣಾಮಗಳು…… ಹ್ಯಾಂಗ್ ಓವರ್, ದುಷ್ಪರಿಣಾಮಗಳು ಆರಂಭವಾಗುತ್ತದೆ. ಆಲ್ಕೋಹಾಲ್ ನಿಂದ ಯಾವುದೆ ಲಾಭವಿಲ್ಲ. ಆದರೆ ಫಿನಾಲಿಕ್ ಕಾಂಪೋಂಡ್ ನಿಂದ ಕೆಲ ಆರೋಗ್ಯಕರ ಅಂಶ ಕಾಣಬಹುದು ಆದರೆ ಇದು ಮದ್ಯಕ್ಕಿಂತ ಬೇರೆ ಬೇರೆ ಪದಾರ್ಥಗಳಲ್ಲು ಸಿಗುತ್ತವೆ. ಏನಿದು ಫಿನಾಲಿಕ್ ಕಾಂಪೋಂಡ್ ? ಯಾವೆಲ್ಲ ಪದಾರ್ಥಗಳಲ್ಲಿ ಲಭ್ಯವಿರುತ್ತದೆ ಎಂಬಿತ್ಯಾದಿ ಮಾಹಿತಿಗಾಗಿ ಡಾ. ರಾಜು ಅವರ ಈ ವಿಡಿಯೋ ನೋಡಿ ಅಭಿಪ್ರಾಯ ತಿಳಿಸಿ.