ಶಿವಮೊಗ್ಗ: ಸಾಗರ ತಾಲ್ಲೂಕಿನ ಯುವ ಗಾಯಕ ಜಿ.ಕೆ. ಭರತ್ ಅವರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2022’ ಸೇರ್ಪಡೆಯಾಗಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ಕುರಿತು ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿ.ಕೆ. ಭರತ್, ಈ ಸಾಧನೆ 2001 -2021 ರ ನಡುವೆ ಬಿಡುಗಡೆಯಾದ 21 ಕನ್ನಡ ಚಲನಚಿತ್ರಗಳ ಕೆಲವು ಸಾಲುಗಳನ್ನು ಸೇರಿಸಿ ಮಾಷಫ್ ಸಾಂಗ್ ಹಾಡುವುದರ ಮೂಲಕ ಈ ಗೌರವ ನನಗೆ ದೊರಕಿದೆ ಎಂದರು.
ನಾನು ಮೂಲತಃ ಗಾಯಕನಾಗಿದ್ದು, ಈಗಾಗಲೇ ಕನ್ನಡದ ಐದಾರು ಚಿತ್ರಗಳಲ್ಲಿ ಹಾಡಿದ್ದೇನೆ. ಮೂರು ಚಿತ್ರಗಳು ಬಿಡುಗಡೆಯಾಗಿವೆ. ಕಿರುತೆರೆಯ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದೇನೆ. 21 ವರ್ಷಗಳ ಚಿತ್ರಗಳ ಹಾಡುಗಳ ಕೆಲವು ಸಾಲುಗಳನ್ನು ಕೇವಲ ಏಳೆಂಟು ನಿಮಿಷಗಳಲ್ಲಿ ಹಾಡುವುದು ಕೂಡ ಒಂದು ಸಾಧನೆಯಾಗಿತ್ತು. ಈ ಸಾಧನೆ ಮಾಡಿದ ಹೆಮ್ಮೆ ನನ್ನದಾಗಿದೆ. ಇದಕ್ಕೆ ನಮ್ಮ ತಂದೆ ಕರಿಬಸಪ್ಪ, ತಾಯಿ ಲೀಲಾ ಹಾಗೂ ಗೆಳೆಯರು ಕಾರಣರಾಗಿದ್ದಾರೆ. ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭರತ್ ಅವರ ತಂದೆ ಗೌತಮಪುರ ಕರಿಬಸಪ್ಪ, ಮಾರ್ಗದರ್ಶಕರಾದ ಉಷಾನಾಯಕ್ ಇದ್ದರು.