ಮೈಸೂರು- ಈ ಬಾರಿ ಅದ್ದೂರಿ ದಸರಾವನ್ನು ಆಚರಣೆ ಮಾಡಿದೆ ಸರ್ಕಾರ. ಕೊರೊನಾದಿಂದ ಸರಳ ದಸರಾ ಹಬ್ಬ ಆಚರಣೆ ಆಗ್ತಾ ಇತ್ತು. ಈ ವರ್ಷ ಕೊರೊನಾ ಕಡಿಮೆಯಾಗಿದ್ದರಿಂದ ಅದ್ಧೂರಿ ದಸರಾ ಹಬ್ಬ ಆಗಿದೆ. ದಸರಾ ಅಂದರೆ ದೀಪಾಲಂಕಾರ ಪ್ರಮುಖವಾದದ್ದು. ಈ ವರ್ಷ ನಿರೀಕ್ಷೆಗಿಂತ ದೀಪ ಅಲಂಕಾರಕ್ಕೆ ವೆಚ್ಚ ಹೆಚ್ಚಾಗಿದೆ.
ಹೌದು, ಈ ಬಾರಿಯ ದೀಪಾಲಂಕಾರಕ್ಕೆ ಅಂದಾಜು 4.5 ಕೋಟಿ ರೂ. ವೆಚ್ಚವಾಗಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಇದೀಗ 1 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಹೌದು ಈ ಬಾರಿ ಸೆಸ್ಕ್‌ಗೆ ಬರೋಬ್ಬರಿ 5.5 ಕೋಟಿ ರೂ. ವೆಚ್ಚವಾಗಿದೆಯಂತೆ. ರಾತ್ರಿಯ ಅವಧಿ ವಿಸ್ತರಣೆ ಜೊತೆಗೆ ಹೆಚ್ಚು ದಿನಗಳ ಕಾಲ ಇದ್ದಿದ್ದರಿಂದ ಹೆಚ್ಚುವರಿ ಖರ್ಚಾಗಿದೆಯಂತೆ.
ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ಮೊದಲು ನಿಗದಿಯಾಗಿತ್ತು. ನಂತರ ಕೋರಿಕೆ ಮೇರೆಗೆ ಅದನ್ನು ಅ.10ರವರೆಗೆ ವಿಸ್ತರಿಸಲಾಯಿತು. ಇನ್ನು ದೀಪಾಲಂಕಾರದ ಅವಧಿ ಮುಗಿದರೂ ರಾತ್ರಿ 11ರಿಂದ 11.30 ರವರೆಗೂ ದೀಪಾಲಂಕಾರ ಮುಂದುವರಿಸಲಾಗಿತ್ತು. ಇದು ಹೆಚ್ಚುವರಿಗೆ ಕಾರಣವಾಗಿದೆಯಂತೆ.