ಬೆಂಗಳೂರು- ನಗರದಲ್ಲಿ ಕೆಲವು ದಿನಗಳಿಂದ ಹವಾಮಾನದಲ್ಲಿ ಭಾರೀ ಬದಲಾವಣೆ ಆಗ್ತಾ ಇದೆ. ರಾತ್ರಿ ಮಳೆ ಬಂದರೆ ಬೆಳಗ್ಗೆ ವಿಪರೀತ ಬಿಸಿಲು ಇದೆ. ಈ ಬದಲಾದ ಹವಾಮಾನದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ವೈರಲ್ ಫೀವರ್ ಹೆಚ್ಚಾಗುತ್ತಿದೆ.
ಹೌದು, ಮೂರ್ನಾಲ್ಕು ವಾರಗಳಿಂದ ಹವಾಮಾನ ವೈಪರೀತ್ಯದಿಂದ ಜ್ವರ, ಕೆಮ್ಮು, ಶೀತ, ಹೊಟ್ಟೆ, ತಲೆ ನೋವು ಹೀಗೆ ಅನೇಕ ರೋಗ ಶುರುವಾಗಿದ್ದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಜನ ಸಾಮಾಜಿಕ ಅಂತರ, ಮಾಸ್ಕ್ ಹಾಕೋದು ಮರೆತಿರೋದೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಮನುಷ್ಯನ ಉಸಿರಾಟ ಬೇರೆಯವರಿಗೆ ತಾಕಿದರೆ ಸಾಕು ವೈರಸ್ ಹರಡುವ ಸಾಧ್ಯತೆಗಳು ಹೆಚ್ಚಿವೆಯಂತೆ. ಹೀಗಾಗಿ ಮಾಸ್ಕ್ ಹಾಕಿ ಅಂತಿದ್ದಾರೆ ವೈದ್ಯರು. ಜೊತೆಗೆ ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ ಅಂತರ ಕಾಪಾಡೋದು ಒಳ್ಳೆಯದು. ಸದ್ಯ ಹೊಸ ವೈರಸ್ ಗಳು ಹವಾಮಾನ ಬದಲಾವಣೆ ಆದಾಗ ಉತ್ಪತ್ತಿ ಆಗೋದು ಸಾಮಾನ್ಯ. ಆದರೆ ಮುನ್ನೆಚ್ಚರಿಕೆ ಕ್ರಮ ಉತ್ತಮ ಅಂತಿದ್ದಾರೆ ವೈದ್ಯರು.