ಚಿತ್ರದುರ್ಗ: ಮುರುಘಾಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕು ವರ್ಷದ ಮಗು ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಲ್ಕು ವರ್ಷದ ಹಿಂದೆ ಪತ್ತೆಯಾಗಿದ್ದ ಮಗುವನ್ನು ಮಠಕ್ಕೆ ನಾನೇ ಕೊಟ್ಟಿದ್ದೆ ಎಂದು ಮಠದ ಬಳಿಯ ಟೀ ಅಂಗಡಿ ಮಹಿಳೆಯೊಬ್ಬರು ತಿಳಿಸಿದ್ದಾರೆ.
ಫೈರೋಜಾ ಎಂಬ ಮಹಿಳೆ ನಾಲ್ಕು ವರ್ಷದ ಹಿಂದೆ ಮಠದ ಮುಂದಿನ ಕೌಂಪೌಂಡ್ ಬಳಿ ಹೆಣ್ಣು ಮಗು ಪತ್ತೆಯಾಗಿತ್ತು. ಮಗುವಿನ ಕೈಲಿ ಒಂದು ಪತ್ರ ಇರಿಸಲಾಗಿತ್ತು. ಅದರಲ್ಲಿ ದಯವಿಟ್ಟು ಮಗುವನ್ನು ಮಠಕ್ಕೆ ಸೇರಿಸಿ ಎಂದು ಬರೆಯಲಾಗಿತ್ತು. ಮಠದ ಸಿಬ್ಬಂದಿಗಳು ಪತ್ರವನ್ನು ತ್ತೆಗೆದುಕೊಂಡು ಹೋಗಿದ್ದರು. ಮಗುವನ್ನು ನಾನೇ ನೋಡಿಕೊಳ್ಳುವುದಾಗಿ ಹೇಳಿದ್ದೆ. ಆದರೆ ಸ್ವಾಮೀಜಿಗಳು ಮಠದ ಸಿಬ್ಬಂದಿಗಳನ್ನು ಕಳುಹಿಸಿ ಮಗುವನ್ನು ತೆಗೆದುಕೊಂಡು ಹೋಗಿದ್ದರು.
ಕೆಲ ಸ್ಥಳೀಯರು ಮಠಕ್ಕೆ ಹೋಗಿ ಮಗುವನ್ನು ಕೊಡಿ ನೋಡಿಕೊಳ್ಳುತ್ತೇವೆ ಎಂದು ಕೇಳಿದ್ದರು. ಆದರೆ ಸ್ಥಳೀಯರ ಬಳಿ ಆಸ್ತಿ ಇದ್ದರೆ ಅದನ್ನು ಮಗುವಿನ ಹೆಸರಿಗೆ ಬರೆಸಿ ಮಗುವನ್ನು ಕರೆದುಕೊಂಡು ಹೋಗಬಹುದು ಎಂದಿದ್ದರಂತೆ. ಅಂದಿನಿಂದ ಮಗು ಮಠದಲ್ಲಿಯೇ ಚೆನ್ನಾಗಿ ಇದೆ ಎಂದು ಹೇಳಿದ್ದಾರೆ.