alex Certify ಮದುವೆಯಾದ ನಾಲ್ಕು ತಿಂಗಳಿಗೇ ಅವಳಿ ಮಕ್ಕಳು; ನಯನತಾರ – ವಿಜ್ಞೇಶ್ ದಂಪತಿಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ನಾಲ್ಕು ತಿಂಗಳಿಗೇ ಅವಳಿ ಮಕ್ಕಳು; ನಯನತಾರ – ವಿಜ್ಞೇಶ್ ದಂಪತಿಗೆ ಎದುರಾಯ್ತು ಸಂಕಷ್ಟ

ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಜ್ಞೇಶ್ ಶಿವನ್ ನಾಲ್ಕು ತಿಂಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಇದೀಗ ದಂಪತಿ ತಾವು ಅವಳಿ ಮಕ್ಕಳನ್ನು ಪಡೆದುಕೊಂಡಿರುವುದಾಗಿ ಘೋಷಿಸಿದ್ದು, ಈ ವಿಷಯ ಈಗ ಇವರುಗಳಿಗೆ ಕಾನೂನಿನ ಸಂಕಷ್ಟ ತಂದೊಡ್ಡಿದೆ.

ನಯನತಾರಾ ಹಾಗೂ ವಿಜ್ಞೇಶ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಈ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಅಂತಹ ದಂಪತಿ ವಿವಾಹವಾಗಿ ಕನಿಷ್ಠ ಐದು ವರ್ಷಗಳಾಗಿರಬೇಕು. ಆದರೆ ನಯನತಾರ – ವಿಜ್ಞೇಶ್ ವಿವಾಹವಾಗಿ ಕೇವಲ ನಾಲ್ಕು ತಿಂಗಳು ಮಾತ್ರ ಕಳೆದಿದೆ.

ಹೀಗಾಗಿಯೇ ಈಗ ತಮಿಳುನಾಡು ಸರ್ಕಾರ ಈ ವಿಷಯದ ತನಿಖೆಗೆ ಮುಂದಾಗಿದ್ದು, ನಯನತಾರಾ ಹಾಗೂ ವಿಜ್ಞೇಶ್ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆಯೇ ? ಅದಕ್ಕೂ ಮುನ್ನ ತಮಗೆ ಮಕ್ಕಳನ್ನು ಹೊಂದುವ ಸಾಮರ್ಥ್ಯವಿಲ್ಲವೆಂದು ವೈದ್ಯಕೀಯ ಪ್ರಮಾಣ ಪತ್ರ ಪಡೆದಿದ್ದಾರೆಯೇ ? ಎಂಬ ಕುರಿತು ಮಾಹಿತಿ ಪಡೆಯಲಾಗುತ್ತದೆ. ಒಂದೊಮ್ಮೆ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ಸಹ ವಿಧಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...