![](https://kannadadunia.com/wp-content/uploads/2022/10/compress_diwali_2022_festival.jpg)
ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ದೀಪಾವಳಿ ಹಬ್ಬಕ್ಕೆ ಪ್ರತಿಯೊಬ್ಬರೂ ತಯಾರಿ ಶುರು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ದೀಪಗಳು, ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಲಕ್ಷ್ಮಿ ಶುದ್ಧವಾದ ಹಾಗೂ ಸ್ವಚ್ಛವಾದ ಮನೆಯಲ್ಲಿ ಮಾತ್ರ ನೆಲೆಸ್ತಾಳೆ. ಇದೇ ಕಾರಣಕ್ಕೆ ದೀಪಾವಳಿ ಲಕ್ಷ್ಮಿ ಪೂಜೆಗೂ ಮುನ್ನ ಜನರು ಮನೆಯ ಸ್ವಚ್ಛತೆ ಶುರು ಮಾಡ್ತಾರೆ. ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ದೀಪಾವಳಿಗೂ ಮುನ್ನ ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಜನರು ಮುರಿದ ವಸ್ತುಗಳು, ಪಾತ್ರೆಗಳು, ಹಾಳಾದ ಪೊರಕೆ, ಹಳೆಯ ಬಟ್ಟೆ ಎಲ್ಲವನ್ನೂ ಹೊರಗೆ ಹಾಕ್ತಾರೆ. ಹಾಗೆಯೇ ಮನೆಯ ಮುಖ್ಯ ಜಾಗವೊಂದನ್ನು ತಪ್ಪದೇ ಕ್ಲೀನ್ ಮಾಡಬೇಕಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಹೆಚ್ಚಿನ ಮಹತ್ವವಿದೆ. ಮನೆಗೆ ಧನಾತ್ಮಕ ಶಕ್ತಿ ಹರಿದು ಬರುವುದು ಅಲ್ಲಿಂದಲೆ. ಹಾಗೆ ಮನೆಗೆ ಲಕ್ಷ್ಮಿ ಬರುವುದು ಕೂಡ ಮನೆಯ ಮುಖ್ಯ ದ್ವಾರದಿಂದಲೆ. ಹಾಗಾಗಿ ದೇವರ ಮನೆ, ಅಡುಗೆ ಮನೆಯ ಜೊತೆಗೆ ಮನೆಯ ಮುಖ್ಯ ಬಾಗಿಲನ್ನು ಕೂಡ ಕ್ಲೀನ್ ಮಾಡ್ಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಕೊಳಕಿರುವ ಮನೆಯನ್ನು ಲಕ್ಷ್ಮಿ ಎಂದೂ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಲಕ್ಷ್ಮಿ ಮನೆಗೆ ಬರಬೇಕು, ದೇವರ ಕೃಪೆ ನಿಮ್ಮ ಮೇಲೆ ಆಗಬೇಕು ಎಂದಾದ್ರೆ ನೀವು ಮನೆಯ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ. ಮನೆಯ ಮುಖ್ಯ ದ್ವಾರಕ್ಕೆ ನೀವು ಮಾವಿನ ಎಲೆಗಳ ಮಾಲೆ ಮಾಡಿ ಹಾಕಬೇಕು. ಇದ್ರಿಂದ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ. ಹಾಗೆಯೇ ಪ್ರತಿ ದಿನ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ. ಇದ್ರಿಂದ ಲಕ್ಷ್ಮಿ ಬೇಗ ಖುಷಿಯಾಗ್ತಾಳೆ. ಬಲಗಾಲೊದ್ದು ನಿಮ್ಮ ಮನೆಗೆ ಬರ್ತಾಳೆ ಎನ್ನಲಾಗುತ್ತದೆ. ಬಾಗಿಲಿನ ಎರಡೂ ಕಡೆ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿದ್ರೆ ಕೂಡ ಮಂಗಳವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.