ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರೂ ವಾಟ್ಸಾಪ್ ಯೂಸ್ ಮಾಡ್ತಾರೆ. ತ್ವರಿತ ಮೆಸೇಜಿಂಗ್ ಸೇವೆ, ವಾಯ್ಸ್ ಕಾಲ್, ವಿಡಿಯೋ ಕಾಲ್ ಸೇರಿದಂತೆ ವಿವಿಧ ಬಗೆಯ ಆಯ್ಕೆಗಳು ಇದರಲ್ಲಿವೆ. ಆದಾಗ್ಯೂ WhatsApp ಕಾರ್ಯನಿರ್ವಹಿಸಲು, ನಿಮ್ಮ ಫೋನ್ ಸಂಖ್ಯೆಯನ್ನು ಅವಲಂಬಿಸಿದೆ.
ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನೀವು ಬದಲಾಯಿಸಿದರೆ ಖಾತೆಯನ್ನು ನವೀಕರಿಸಬೇಕು. ನಿಯಮಿತ WhatsApp ಯಾವುದೇ ಮೆಸೇಜ್‌ಗಳನ್ನು ಕಳೆದುಕೊಳ್ಳದೆಯೇ ಫೋನ್ ನಂಬರ್ ಬದಲಾಯಿಸುವುದು ಹೇಗೆ ಅನ್ನೋದನ್ನು ನೋಡೋಣ.
ಹಳೆಯ ಮೊಬೈಲ್ ನಂಬರ್‌ನಿಂದ WhatsApp ಅನ್ನು ಹೊಸದಕ್ಕೆ ಬದಲಾಯಿಸುವುದು ಸುಲಭ. ಬಳಕೆದಾರರ ಫೋನ್ ನಂಬರ್ ಬದಲಾದಾಗ ಅವರ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ವಾಟ್ಸಾಪ್ ಸ್ವಯಂಚಾಲಿತವಾಗಿ ಅದನ್ನು ತಿಳಿಸುವ ಆಯ್ಕೆಯನ್ನು ನೀಡುತ್ತದೆ.
ಮೊದಲು ಹೊಸ ಸಿಮ್ ಕಾರ್ಡ್ ಅನ್ನು ನಿಮ್ಮ ಫೋನ್‌ಗೆ ಹಾಕಿಬಿಡಿ. ನಿಮ್ಮ ಫೋನ್ ನಂಬರ್ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಅದು ಕರೆಗಳು ಮತ್ತು SMS ಅನ್ನು ಸ್ವೀಕರಿಸಬಹುದೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹಿಂದಿನ ಫೋನ್ ಸಂಖ್ಯೆಯೊಂದಿಗೆ WhatsApp ಅನ್ನು ಇನ್ನೂ ನೋಂದಾಯಿಸಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸಹ ಮುಖ್ಯ.
WhatsApp ಸೆಟ್ಟಿಂಗ್‌ಗಳ ಮೆನುವಿನಲ್ಲಿ, ರಿಜಿಸ್ಟರ್ಡ್ ಫೋನ್ ಸಂಖ್ಯೆಯನ್ನು ವೀಕ್ಷಿಸಲು ನಿಮ್ಮ ಪ್ರೊಫೈಲ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ಹೆಸರು ಮತ್ತು ನೀವು ಅಪ್ಲಿಕೇಶನ್‌ನೊಂದಿಗೆ ನೋಂದಾಯಿಸಿದ ಫೋನ್ ನಂಬರ್ ಪರದೆ ಮೇಲೆ ಬರುತ್ತದೆ. ಮೊದಲು ನಿಮ್ಮ ಫೋನ್‌ನಲ್ಲಿ WhatsApp ಓಪನ್ ಮಾಡಿಕೊಳ್ಳಿ. ನೀವು ಐಫೋನ್ ಬಳಸುತ್ತಿದ್ದರೆ, ಸೆಟ್ಟಿಂಗ್ ಓಪನ್ ಮಾಡಿಕೊಳ್ಳಬೇಕು.
Android ಸಾಧನಗಳ ಬಳಕೆದಾರರು ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಸ್ಪರ್ಶಿಸುವ ಮೂಲಕ ಸೆಟ್ಟಿಂಗ್‌ಗಳ ಮೆನುವನ್ನು ತಲುಪಬಹುದು. ಮೆನುವಿನಿಂದ ಖಾತೆಯನ್ನು ಆಯ್ಕೆಮಾಡಿ, ನಂತರ ಸಂಖ್ಯೆಯನ್ನು ಬದಲಿಸಿ ಅದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಹೊಸ ಸಂಖ್ಯೆಯು ಫೋನ್ ಕರೆಗಳು ಅಥವಾ SMS ಸಂದೇಶಗಳನ್ನು ಸ್ವೀಕರಿಸಬಹುದೇ ಎಂದು ಖಚಿತಪಡಿಸಲು ಕೇಳುವ ಪಾಪ್ಅಪ್ ಈಗ ಕಾಣಿಸಿಕೊಳ್ಳುತ್ತದೆ. ದೃಢೀಕರಿಸಿದ ನಂತರ, ಮುಂದಿನ ಬಟನ್ ಕ್ಲಿಕ್ ಮಾಡಿ. ನಿಮ್ಮ ಹಳೆಯ ಮತ್ತು ಹೊಸ ಫೋನ್ ಸಂಖ್ಯೆಗಳನ್ನು ಭರ್ತಿ ಮಾಡಿ.
WhatsApp ಸಂಖ್ಯೆಯನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಮುಂದೆ ಟ್ಯಾಪ್ ಮಾಡಿ. ನಿಮ್ಮ ಹೊಸ ಮೊಬೈಲ್ ನಂಬರ್ ಅನ್ನು ಕಾಂಟಾಕ್ಟ್‌ನಲ್ಲಿರುವವರಿಗೆಲ್ಲ ತಿಳಿಸಲು ನೀವು ಬಯಸುತ್ತೀರಾ ಎಂದು WhatsApp ನಿಮ್ಮನ್ನು ಕೇಳುತ್ತದೆ. ನಿಮಗೆ ಬೇಕಾದ್ದನ್ನು ಅಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ತಕ್ಷಣವೇ ನಿಮ್ಮ ಹೊಸ WhatsApp ನಂಬರ್ ಅನ್ನು ಎಲ್ಲರಿಗೂ ತಿಳಿಸುತ್ತದೆ. ಅದಾದ ಬಳಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ.