ಅತಿ ಸುರಕ್ಷಿತ ಮತ್ತು ವೇಗದ ರೈಲು ಎಂದೇ ಪರಿಗಣಿಸಲಾಗಿರುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ದೇಶದಲ್ಲಿ ಈಗಾಗಲೇ ಸಂಚರಿಸುತ್ತೇವೆ. ನಾಲ್ಕು ರೈಲುಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಮತ್ತೊಂದು ರೈಲು ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಹಿಮಾಚಲ ಪ್ರದೇಶದ ಉನಾ ರೈಲು ನಿಲ್ದಾಣದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಉನಾ ಹಾಗೂ ನವದೆಹಲಿ ನಡುವೆ ಸಂಚರಿಸಲಿದೆ.
ಇದರ ಮಧ್ಯೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರವನ್ನು ಘೋಷಿಸಲಾಗಿದ್ದು, ನವೆಂಬರ್ 10ರಂದು ಇದು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿದುಬಂದಿದೆ. ಇರಲು ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಸಂಚರಿಸಲಿದ್ದು, ರಾಜ್ಯದ ಜನತೆಗೆ ಅನುಕೂಲಕರವಾಗಲಿದೆ.