alex Certify ಅರೆಕಾಲಿಕ ಕ್ಯಾಬ್​ ಚಾಲಕನ ಹೃದಯಸ್ಪರ್ಶಿ ಕಥೆ ಹಂಚಿಕೊಂಡ ಐಎಎಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೆಕಾಲಿಕ ಕ್ಯಾಬ್​ ಚಾಲಕನ ಹೃದಯಸ್ಪರ್ಶಿ ಕಥೆ ಹಂಚಿಕೊಂಡ ಐಎಎಸ್‌ ಅಧಿಕಾರಿ

ಆಗೊಮ್ಮೆ ಈಗೊಮ್ಮೆ ಜನರು ತಮ್ಮ ಹೆತ್ತವರ ಜೀವನವನ್ನು ಉತ್ತಮಗೊಳಿಸಲು ತಮ್ಮ ನೂರಕ್ಕೆ ನೂರು ಪ್ರತಿಶತ ಶ್ರಮ ಹಾಕುವ ನಿದರ್ಶನಗಳು ನೆಟ್ಟಿಗರಿಂದ ಹೃತ್ಪೂರ್ವಕ ಚಪ್ಪಾಳೆ ಪಡೆದಿವೆ. ಅವರ ಕಥೆಗಳು ಈ ಜಗತ್ತಿನಲ್ಲಿ ಒಳ್ಳೆಯತನವು ಇನ್ನೂ ಅಸ್ತಿತ್ವದಲ್ಲಿದೆ ಎಂದು ನಂಬುವಂತೆ ಮಾಡುತ್ತದಲ್ಲದೇ ಅನೇಕರಿಗೆ ಸ್ಪೂರ್ತಿಯನ್ನು ನೀಡುತ್ತದೆ. ಈ ಸಾಲಿಗೆ ಸೇರಬಹುದಾದ ವೀಡಿಯೊವನ್ನು ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶರಣ್​ ಅವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ.

ಕ್ಯಾಬ್​ ಚಾಲಕ ತನ್ನ ಜೀವನದ ಕಥೆಯನ್ನು ಹೇಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಅವರು ವೃತ್ತಿಪರ ಚಾಲಕರಲ್ಲ ಮತ್ತು ಅವರ ಬಿಡುವಿನ ವೇಳೆಯಲ್ಲಿ ಮತ್ತು ರಜೆಯ ದಿನಗಳಲ್ಲಿ ಮಾತ್ರ ಕ್ಯಾಬ್​ ಓಡಿಸುತ್ತಾರೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ.

ಆ ವ್ಯಕ್ತಿ ತಾನು ಕಂಪನಿಯಲ್ಲಿ ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ವಿವರಿಸುತ್ತಾನೆ, ಆದರೆ ತನ್ನ 65 ವರ್ಷದ ತಂದೆಗೆ ಸಹಾಯ ಮಾಡಲು ಈ ಅರೆಕಾಲಿಕ ಡ್ರೈವಿಂಗ್​ ಕೆಲಸವನ್ನು ಮಾಡುತ್ತಾನೆ.

ಅವರ ತಂದೆ ಇನ್ನೂ ಕೂಡ ನಿವೃತ್ತರಾಗಿಲ್ಲ, ಏಕೆಂದರೆ ಅವರು ಮನೆಯಲ್ಲಿ ಕುಳಿತುಕೊಂಡು ಸೋಮಾರಿಯಾಗಲು ಇಷ್ಟ ಪಡುವುದಿಲ್ಲ ಎಂದು ಆ ಚಾಲಕ ಹೇಳುತ್ತಾನೆ.

ಈ ವಿಡಿಯೋ ನೋಡಿದ ನೆಟ್ಟಿಗರ ಹೃದಯ ತಟ್ಟಿದೆ. ನೂರಾರು ಮಂದಿ ಕಾಮೆಂಟ್​ ಮಾಡಿದ್ದು, ಆ ವ್ಯಕ್ತಿಗೆ ಭೇಷ್​ ಎಂದಿದ್ದಾರೆ. ತನ್ನ ತಂದೆಯನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವ ಈ ವ್ಯಕ್ತಿಯನ್ನು ಶ್ಲಾಘಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...