ಇಂದಿನ ದಿನಗಳಲ್ಲಿ ಸೆಕ್ಸ್ ಬಗ್ಗೆ ಮಾತನಾಡುವುದು ಸಾಮಾನ್ಯ. ಸೆಕ್ಸ್ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದ್ರೆ ಕೆಲವರು ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ತಾರೆ.
ಶಾರೀರಿಕ ಸಂಬಂಧ ಅಪರೂಪವಾಗುತ್ತದೆ. ನಮಗೆ ಗೊತ್ತಿಲ್ಲದೆ ಈ ಸೆಕ್ಸ್ ನ ನಿರಾಸಕ್ತಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಂಭೋಗದಲ್ಲಿ ರುಚಿ ಕಳೆದುಕೊಂಡವರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ.
ಯಾವುದೇ ಕಾರಣಕ್ಕೆ ನೀವು ಸೆಕ್ಸ್ ನಿಂದ ದೂರವಿದ್ರೆ ಲೈಂಗಿಕ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಅಮೆರಿಕನ್ ಜರ್ನಲ್ ಆಫ್ ಮೆಡಿಸಿನ್‌ನ ವರದಿಯ ಪ್ರಕಾರ, ಪುರುಷರು ಸೆಕ್ಸ್ ನಿಂದ ದೂರವಿದ್ದರೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆ ಎದುರಾಗುತ್ತದೆ. ಮಹಿಳೆಯರು ವಯಸ್ಸಾದಂತೆ ಲೈಂಗಿಕತೆಯಿಂದ ದೂರವಿದ್ರೆ ಉತ್ಸಾಹ ಕಡಿಮೆಯಾಗ್ತಾ ಹೋಗುತ್ತದೆ.
ಸಂಭೋಗದ ಕೊರತೆ ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆ ಸೆಕ್ಸ್ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಂಗಾತಿ ಮಧ್ಯೆ ಪ್ರೀತಿ, ವಿಶ್ವಾಸ, ನಂಬಿಕೆ ಹೆಚ್ಚಾಗುತ್ತದೆ. ಆದ್ರೆ ಸಂಭೋಗ ಕಡಿಮೆಯಾಗ್ತಿದ್ದಂತೆ ನಂಬಿಕೆ ಕೊರತೆ ಕಾಡಲು ಶುರುವಾಗುತ್ತದೆ. ಪತಿ-ಪತ್ನಿ ಮಧ್ಯೆ ಜಗಳಕ್ಕೂ ಇದು ಕಾರಣವಾಗುತ್ತದೆ.
ಸೆಕ್ಸ್ ಕಡಿಮೆಯಾಗ್ತಿದ್ದಂತೆ ಒತ್ತಡ ಹೆಚ್ಚಾಗುತ್ತದೆ. ನಿಯಮಿತ ರೂಪದಲ್ಲಿ ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಆದ್ರೆ ಸೆಕ್ಸ್ ಜೀವನದಲ್ಲಿ ಕಡಿಮೆಯಾಗ್ತಿದ್ದಂತೆ ಆನಂದ ಕಡಿಮೆಯಾಗಿ, ಒತ್ತಡ ಹೆಚ್ಚಾಗುತ್ತದೆ. ದೀರ್ಘಕಾಲ ಸೆಕ್ಸ್ ನಿಂದ ದೂರವಿದ್ರೆ ಪುರುಷರಿಗಿಂತ ಮಹಿಳೆಯರನ್ನು ಖಿನ್ನತೆ ಹೆಚ್ಚು ಕಾಡುತ್ತದೆಯಂತೆ.