ಅಮಸ್ಟರ್‌ಡಾಮ್- ನಮ್ಮ ಬೆಂಗಳೂರಿನಲ್ಲಿ ರಾಜಕಾಲುವೆ ಕ್ಲೀನ್ ಮಾಡುವಾಗ ಅಥವಾ ಊಳೆತ್ತುವಾಗ ಅಬ್ಬಬ್ಬಾ ಅಂದ್ರೆ ಲೋಡ್ ಗಟ್ಟಲೆ ಕಸ ಸಿಗೋದು ಕಾಮನ್. ಆದರೆ ಇಲ್ಲೊಂದು ನಗರದಲ್ಲಿ ಕಾಲುವೆ ಹುಡುಕಿದರೆ ಸಾಕು ಬರೀ ಬೈಸಿಕಲ್, ಮೋಟರ್ ಸೈಕಲ್ ಗಳು ಸಿಗುತ್ತದೆ. ಅದ್ಯಾವುದು ನಗರ ಅಂದ್ರೆ, ಅದೇ ನೆದರ್ಲ್ಯಾಂಡ್‌ನ ಅಮಸ್ಟರ್‌ಡಾಮ್.
ಹೌದು, ಇಂಥಹದೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಸುಮಾರು 16 ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 80 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ ಈ ವಿಡಿಯೋ. ಹಿಟಾಚಿ ರೀತಿಯ ಮೆಷಿನ್ ಬಳಸಿ ಕಾಲುವೆ ಕ್ಲೀನ್ ಮಾಡುವ ವೇಳೆ ಸಾವಿರಾರು ಬೈಸಿಕಲ್ ಗಳು ಸಿಕ್ಕಿವೆ. ಈ ಸೈಕಲ್ ಗಳ ಪೈಕಿ ಸುಮಾರು ಸೈಕಲ್ ಗಳು ವರ್ಕಿಂಗ್ ಕಂಡೀಷನ್ ನಲ್ಲೇ ಇವೆ ಎನ್ನಲಾಗಿದೆ.
ಇನ್ನು ಈ ವಿಡಿಯೋ ವೀಕ್ಷಿಸಿದ ಅನೇಕರು ಒಂದೊಂದು ಕಮೆಂಟ್ ಮಾಡಿದ್ದಾರೆ. ಇಡೀ ಅಮಸ್ಟರ್‌ಡಾಮ್‌ನಲ್ಲಿ ಒಟ್ಟು 8 ಲಕ್ಷ ಬೈಸಿಕಲ್‌ಗಳಿವೆ. ಪ್ರತಿ ವರ್ಷವೂ 10 ಸಾವಿರಕ್ಕೂ ಹೆಚ್ಚು ಬೈಸಿಕಲ್‌ಗಳನ್ನು ಜನ ಕಾಲುವೆಗೆ ತಳ್ಳುತ್ತಾರೆ ಎಂದು ಒಂದಿಷ್ಟು ಜನ ಕಮೆಂಟ್‌ನ ಮಾಡಿದ್ದಾರೆ. ಆದರೆ ಈ ಕಾಲುವೆಗಳಿಗೆ ಯಾಕೆ ಹೀಗೆ ಸೈಕಲ್, ಬೈಕ್ ಗಳನ್ನು ಹಾಕುತ್ತಾರೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಎಲ್ಲೂ ಇಲ್ಲ.
https://twitter.com/Cosasdevida_12/status/1578612740502921217?ref_src=twsrc%5Etfw%7Ctwcamp%5Etweetembed%7Ctwterm%5E1578612740502921217%7Ctwgr%5E8002282436637238ab89d071060a54748dd5312e%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FCosasdevida_12%2Fstatus%2F1578612740502921217%3Fref_src%3Dtwsrc5Etfw