ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದು, ಕರ್ನಾಟಕ ಪ್ರವೇಶಿಸಿ ಈಗಾಗಲೇ 12 ದಿನಗಳು ಕಳೆದಿವೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಂದ ಈ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸದ್ಯ ಚಿತ್ರದುರ್ಗದಿಂದ ಬಳ್ಳಾರಿಗೆ ತೆರಳಲಾಗುತ್ತಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹುರುಪಿನಿಂದ ಪಾಲ್ಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರೊಂದಿಗೆ ಓಡುವ ಮೂಲಕ ಈ ವಯಸ್ಸಿನಲ್ಲೂ ತಾವೆಷ್ಟು ಫಿಟ್ ಎಂಬುದನ್ನು ತೋರಿಸಿದ್ದರು. ಇದೀಗ ಯಾತ್ರೆಯ ಮಧ್ಯೆ ವಾದ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಬುಧವಾರದಂದು ಮಳೆಯಲ್ಲಿ ನೆನೆದಿದ್ದರೂ ಸಹ ಇಂದು ಎಂದಿನ ಹುರುಪಿನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸಿದ್ದರಾಮಯ್ಯನವರು ಪಾಲ್ಗೊಂಡಿದ್ದು, ಈ ವೇಳೆ ವಾದ್ಯದ ಸದ್ದಿಗೆ ಮೈಕುಣಿಸಿದ್ದಾರೆ. ಅಷ್ಟೇ ಅಲ್ಲ ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದವರಿಗೆ ನಗುನಗುತ್ತಲೇ ಅವಕಾಶ ಕೊಟ್ಟಿದ್ದಾರೆ.