‘ಆಧಾರ್’ ಇಂದು ಬಹುತೇಕ ಸೇವೆಗಳನ್ನು ಪಡೆಯಲು ಅನಿವಾರ್ಯವಾಗಿದೆ. ಪ್ರತಿಯೊಂದಕ್ಕೂ ಆಧಾರ್ ಬೇಕಾಗುವ ಕಾರಣ ಇದರಲ್ಲಿನ ವಿವರಗಳನ್ನು ಅಪ್ಡೇಟ್ ಮಾಡುವುದು ಸಹ ಅಷ್ಟೇ ಮುಖ್ಯ.
ಹೀಗಾಗಿ ಭಾರತ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಇದೀಗ ಮಹತ್ವದ ಸಲಹೆ ಒಂದನ್ನು ನೀಡಿದೆ. ಹತ್ತು ವರ್ಷಕ್ಕಿಂತ ಹಿಂದೆ ಆಧಾರ್ ಕಾರ್ಡ್ ಪಡೆದಿದ್ದವರು ತಮ್ಮ ಗುರುತು ಹಾಗೂ ವಾಸಸ್ಥಳ ಪುರಾವೆ ದಾಖಲೆಗಳನ್ನು ಅಪ್ಡೇಟ್ ಮಾಡಲು ಸೂಚಿಸಿದೆ.
ಆದರೆ ಇದು ಕಡ್ಡಾಯ ಎಂಬುದರ ಕುರಿತು ಯುಐಡಿಎಐ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಆಧಾರ್ ಕಾರ್ಡ್ ಪಡೆದು ಹತ್ತು ವರ್ಷಗಳಾಗಿದ್ದರೆ ವಿವರಗಳನ್ನು ಅಪ್ಡೇಟ್ ಮಾಡಲು ಆನ್ಲೈನ್ ಮೂಲಕ ಅಥವಾ ಸಮೀಪದ ಆಧಾರ್ ಕೇಂದ್ರಗಳಲ್ಲಿ ನಿರ್ದಿಷ್ಟ ಶುಲ್ಕ ಪಾವತಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.