alex Certify ಇಂಟರ್ನೆಟ್ ಬಳಸ್ತೀರಾ…? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್ ಬಳಸ್ತೀರಾ…? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಆಧುನಿಕ ಯುಗದಲ್ಲಿ ಜಗತ್ತೇ ಒಂದು ಹಳ್ಳಿಯಂತಾಗಿದೆ. ಅದರಲ್ಲಿಯೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆಲ್ಲಾ ಇಂಟರ್ ನೆಟ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೀವು ಇಂಟರ್ ನೆಟ್ ಬಳಸುತ್ತಿದ್ದೀರಿ ಎಂದರೆ ಈ ಸುದ್ದಿ ಓದಲೇಬೇಕು. ಇಂಟರ್ ನೆಟ್ ಬಳಸುವ ನೀವು ಜಗತ್ತಿನ ಎದುರು ಬಟಾಬಯಲಾದಂತೆಯೇ ಸರಿ.

ಹೌದು, ಇಂಟರ್ ನೆಟ್ ಬಳಕೆದಾರರ ಪ್ರತಿಯೊಂದು ಆಗುಹೋಗುಗಳ ಮೇಲೆ ಮೂರನೇ ಕಣ್ಣು ನಿಗಾ ವಹಿಸಿರುತ್ತದೆ. ನೀವು ಅಂತರ್ಜಾಲದಲ್ಲಿ ಹುಡುಕಾಡುವ ಮಾಹಿತಿ, ನಿಮ್ಮಲ್ಲಿ ನಡೆಯುವ ಸಂವಹನ ಚರ್ಚೆಗಳ ಮೇಲೆ ನಿಗಾ ವಹಿಸಲಾಗಿರುತ್ತದೆ.

ಅಲ್ಲದೇ, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆ ನಡೆದರೆ, ಅದನ್ನೂ ಕೂಡ ಮಾರಾಟದ ಸರಕನ್ನಾಗಿ ಮಾಡಿಕೊಳ್ಳಲಾಗುತ್ತದೆ. ನೀವೇನಾದರೂ ಯಾರಿಗೂ ಗೊತ್ತಾಗಲ್ಲ ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ ಎನ್ನಲಾಗಿದೆ.

ನಿಮಗೆ ಅಗತ್ಯವಿರುವ ಯಾವುದಾದರೂ ಪ್ರಾಡೆಕ್ಟ್ ಬಗ್ಗೆ ಸರ್ಚ್ ಮಾಡಿರುತ್ತಿರಾ ಎಂದಿಟ್ಟುಕೊಳ್ಳಿ, ನೀವು ಅದನ್ನು ಬಿಟ್ಟು ಬೇರೆ ಪುಟಕ್ಕೆ ಹೋದರೂ, ಅದಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮ್ಮ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಸೇಫ್, ಯಾರಿಗೆ ಏನೂ ಗೊತ್ತಾಗಲ್ಲ ಎಂದುಕೊಂಡಿದ್ದರೆ, ಅದು ನಿಮ್ಮ ಭ್ರಮೆ. ಇಂಟರ್ ನೆಟ್ ಬಳಸುತ್ತಿರುವಿರಾದರೆ ಜಗತ್ತಿನ ಎದುರು ನೀವು ಬಟಾಬಯಲಾದಂತೆ ಎಂಬುದಂತೂ ಸತ್ಯ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...