ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಬಹುತೇಕ ರಸ್ತೆಗಿಳಿಯಲು ಸಜ್ಜಾಗಿದೆ. ಉತ್ಪಾದನೆಗೆ ಸಿದ್ಧವಾಗಿರುವ ಅವತಾರದಲ್ಲಿ ಈ ಬೈಕ್ ಕಾಣಿಸಿಕೊಂಡಿದೆ. ಈ ಬೈಕ್‌ನ ಫೋಟೋಗಳು ಕಳೆದ ಎರಡು ವರ್ಷಗಳಿಂದ ಇಂಟರ್ನೆಟ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಇದೀಗ ಫೈನಲ್ ಟಚಪ್‌ನೊಂದಿಗೆ ಮೀಟಿಯರ್ 650 ಬೈಕ್‌ನ ಟೆಸ್ಟಿಂಗ್ ನಡೆಯುತ್ತಿರುವಂತಿದೆ.
ಅವಳಿ ಸಿಲಿಂಡರ್ ಹೊಂದಿರುವ ಈ ಮೋಟಾರ್ ಸೈಕಲ್ ಕ್ರೂಸರ್ ಶೈಲಿಯ ವಿನ್ಯಾಸ ಹೊಂದಿದೆ. ಇದರಲ್ಲಿ ಟಿಯರ್ ಡ್ರಾಪ್-ಆಕಾರದ ಇಂಧನ ಟ್ಯಾಂಕ್, ಅಗಲವಾದ ಹ್ಯಾಂಡಲ್ ಬಾರ್‌ಗಳು, ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳು ಮತ್ತು ನೇರವಾಗಿ ಕುಳಿತುಕೊಳ್ಳುವ ಸ್ಥಾನವಿದೆ.
ಸೂಪರ್ ಮೀಟಿಯರ್ 650, ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‌ಸೆಪ್ಟರ್ 650 ಕೂಡ 648 ಸಿಸಿ, ಅವಳಿ ಸಿಲಿಂಡರ್, ಏರ್-ಆಯಿಲ್-ಕೂಲ್ಡ್ ಹಾರ್ಟ್‌ನಿಂದ ಚಾಲಿತವಾಗುತ್ತವೆ. ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳಿವೆ. ಬ್ರೇಕಿಂಗ್ ಅನ್ನು ಎರಡೂ ತುದಿಗಳಲ್ಲಿ ಡಿಸ್ಕ್‌ಗಳ ಮೂಲಕ ಮಾಡಲಾಗುತ್ತದೆ. ಕ್ರೂಸರ್ ಅನ್ನು ಮೊದಲೇ ಸ್ಪೀಡ್ ಟೆಸ್ಟಿಂಗ್ ಮಾಡಲಾಗಿದ್ದು, ಸಂಪೂರ್ಣವಾಗಿ ಬಿಡಿಭಾಗಗಳೊಂದಿಗೆ ಲೋಡ್ ಮಾಡಲಾಗಿತ್ತು.
ಎನ್‌ಫೀಲ್ಡ್‌ನ ಹೊಸ ಬೈಕ್ ಉತ್ಪಾದನಾ ಶ್ರೇಣಿಯನ್ನು ತಲುಪಲು ಸಿದ್ಧವಾಗಿದೆ. 2023 ರ ಮಧ್ಯದ ವೇಳೆಗೆ ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೆಲೆ ಅಂದಾಜು 3.5 ಲಕ್ಷ ರೂಪಾಯಿ ಇರಬಹುದು.