ಪ್ರಗ್ನೆನ್ಸಿ ಪತ್ತೆ ಹಚ್ಚಿದ ಆಪಲ್ ವಾಚ್…! ರೆಡ್ಡಿಟ್ ನಲ್ಲಿ ವಿವರ ಹಂಚಿಕೊಂಡ ಮಹಿಳೆ 12-10-2022 2:12PM IST / No Comments / Posted In: Latest News, Live News, International 34 ವರ್ಷದ ಮಹಿಳೆ ಕ್ಲಿನಿಕಲ್ ಪರೀಕ್ಷೆಗೆ ಮುಂಚೆಯೇ ತನ್ನ ಪ್ರಗ್ನೆನ್ಸಿಯನ್ನು ಪತ್ತೆ ಮಾಡಿದ ಸಂರ್ಪೂಣ ಕ್ರೆಡಿಟ್ ಅನ್ನು ಆಪಲ್ ವಾಚ್ಗೆ ನೀಡಿದ್ದಾರೆ. ಈಕೆಯ ಕಥೆ ವಿಲಕ್ಷಣ ಎನಿಸಿದರೂ ಆಸಕ್ತಿದಾಯಕವಾಗಿ ಕಾಣಿಸಿದೆ. ಆಪಲ್ ವಾಚ್ಗಳು ಜೀವ ರಕ್ಷಕಗಳಾಗಿ ಮಾರ್ಪಟ್ಟ ವಿವಿಧ ಘಟನೆಗಳು ನಡೆದಿವೆ. ಸ್ಮಾರ್ಟ್ ವಾಚ್ಗಳಂತಹ ಗ್ಯಾಜೆಟ್ಗಳು ಅನೇಕರಿಗೆ ಆಮ್ಲಜನಕದ ಮಟ್ಟ, ಹೃದಯ ಬಡಿತ, ರಕ್ತದೊತ್ತಡ ಮತ್ತು ಇತರ ಮಾಹಿತಿ ಪತ್ತೆಹಚ್ಚಲು ಸಹಾಯ ಮಾಡಿದೆ. ಪ್ರೆಗ್ನೆನ್ಸಿ ಪತ್ತೆ ಹಚ್ಚಿರುವುದು ಇದೇ ಮೊದಲಿರಬಹುದು. ರೆಡ್ಡಿಟ್ನಲ್ಲಿ ಆಪಲ್ ವಾಚ್ನ ಕುರಿತು ಈ ಅದ್ಭುತ ವೈಶಿಷ್ಟ್ಯವನ್ನು ಪೋಸ್ಟ್ ಮಾಡಿದ ಮಹಿಳೆ, ತನ್ನ ಹೃದಯ ಬಡಿತವು ಸಾಮಾನ್ಯವಾಗಿ 57 ರಷ್ಟಿದೆ, ಆದರೆ ಒಂದು ದಿನ ಹೃದಯ ಬಡಿತದಲ್ಲಿ 72 ಕ್ಕೆ ಏರಿಕೆಯಾಗಿದೆ ಎಂದು ಆಪಲ್ ವಾಚ್ನಲ್ಲಿ ಕಾಣಿಸಿತು. ಇದು ಸುಮಾರು 15 ದಿನಗಳವರೆಗೆ ಹೆಚ್ಚಿಸಲ್ಪಟ್ಟಿತು. ಸ್ವಲ್ಪ ಚಿಂತೆಯನ್ನೂ ಉಂಟುಮಾಡಿತು. ಈ ಹೆಚ್ಚಿದ ಹೃದಯ ಬಡಿತದ ಹಿಂದೆ ಸಂಭವನೀಯ ಕಾರಣಗಳನ್ನು ಹುಡುಕಲು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ. ಆಕೆಯ ಹೃದಯ ಬಡಿತದಲ್ಲಿ ಏರುಪೇರು ಉಂಟಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವಳು ಇಸಿಜಿ ಪರೀಕ್ಷೆಯನ್ನು ಮಾಡಿಸಿಕೊಂಡಳು. ಆದರೆ ಅದು ನಕಾರಾತ್ಮಕವಾಗಿ ಹೊರಹೊಮ್ಮಿತು. ಬಳಿಕ ಆನ್ಲೈನ್ನಲ್ಲಿ ಸಂಶೋಧನೆ ಮಾಡಲು ಪ್ರಾರಂಭಿಸಿದಾಗ ಆರಂಭಿಕ ಗರ್ಭಾವಸ್ಥೆಯು ಹೃದಯ ಬಡಿತವನ್ನು ಹೆಚ್ಚಿಸಬಹುದು ಎಂದು ಅರಿತರು. ಬಳಿಕ ಗರ್ಭಧಾರಣೆಯ ಪರೀಕ್ಷೆಗೊಳಪಟ್ಟು ಪರೀಕ್ಷೆಯ ಫಲಿತಾಂಶಗಳನ್ನು ದೃಢೀಕರಿಸಲು ತನ್ನ ವೈದ್ಯರ ಬಳಿಗೆ ಹೋದಾಗ ಪಾಸಿಟಿವ್ ಎಂಬುದು ಖಚಿತವಾಗಿತ್ತು. ಆಕೆ ನಾಲ್ಕು ವಾರಗಳ ಗರ್ಭಿಣಿಯಾಗಿದ್ದಳು. ಆಕೆಯ ಆಪಲ್ ವಾಚ್ ದೇಹದಲ್ಲಾದ ಅಸಾಮಾನ್ಯ ಬದಲಾವಣೆ ಬಗ್ಗೆ ಎಚ್ಚರಿಸಿತು, ಅದು ಅವಳನ್ನು ಪರೀಕ್ಷೆಗೆ ಒಳಪಡಿಸುವಂತೆ ಮಾಡಿತು ಎಂಬುದು ಉಲ್ಲೇಖಾರ್ಹ ಅಂಶ. ವೈದ್ಯರ ದೃಢೀಕರಣದ ನಂತರ ಆಕೆ ತನ್ನ ಆಪಲ್ ವಾಚ್ ತನ್ನ ಗರ್ಭಾವಸ್ಥೆಯನ್ನು ಪತ್ತೆಹಚ್ಚಲು ಕಾರಣದ ಕ್ರೆಡಿಟ್ಗಳನ್ನು ನೀಡಿದಳು. ಸ್ಮಾರ್ಟ್ ವಾಚ್ಗಳು ಹೃದಯ ಬಡಿತದ ಹೊರತಾಗಿ ಸ್ಮಾರ್ಟ್ ವಾಚ್ ಇಸಿಜಿ, ಆಕ್ಸಿಮೀಟರ್, ಋತುಚಕ್ರ, ಹೃದಯ ಬಡಿತ ಮತ್ತು ಇತರ ಮೇಲ್ವಿಚಾರಣೆ ಮಾಡುವಂತಹ ವೈಶಿಷ್ಟ್ಯಗಳನ್ನು ಸಹ ಒದಗಿಸುತ್ತದೆ. Apple Watch detected a higher resting HR for 15 days. I started investigating why and it turned out I was newly pregnant… by inAppleWatch