ತಂದೆಯೊಬ್ಬ ತನ್ನ ಮೃತ ಮಗನ ದೇಹವನ್ನು ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನ ಕಲಕುವಂತಿದೆ.
ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹಾವು ಕಡಿತಕ್ಕೊಳಗಾಗಿದ್ದ ತನ್ನ ಏಳು ವರ್ಷದ ಮಗನನ್ನು ತಂದೆ ಬೈಕಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಬಾಲಕ ಮೃತಪಟ್ಟಿದ್ದು, ಬಳಿಕ ಆತನ ಮೃತ ದೇಹವನ್ನು ತಂದೆ ತಮ್ಮ ಗ್ರಾಮಕ್ಕೆ ಬೈಕಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ತಿರುಪತಿ ಜಿಲ್ಲಾಧಿಕಾರಿ ಕೆ. ವೆಂಕಟರಾಮರೆಡ್ಡಿ, ಬಾಲಕನ ತಂದೆ ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಿರಲಿಲ್ಲ. ಈ ಕುರಿತು ವೈದ್ಯರು ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಬೈಕಿನಲ್ಲಿ ಮಗನ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.