ಭಾರತದಲ್ಲಿ ಜಿಯೋ ಕಂಪನಿ ಪ್ರಾಯೋಗಿಕವಾಗಿ 5ಜಿ ಪ್ರಾರಂಭ ಮಾಡಲಾಗಿದೆ. ಅಕ್ಟೋಬರ್ 5 ರಿಂದ ಸೇವೆ ಆರಂಭವಾಗಿದ್ದು, ಇದರ ಬೆಲೆಯನ್ನು ಇದೀಗ ನಿಗದಿ ಮಾಡಲಾಗಿದೆ. ಗ್ರಾಹಕರು 1 Gbps ವೇಗದಲ್ಲಿ 5G ಸೇವೆಗಳನ್ನು ಬಳಸಬೇಕೆಂದರೆ ಕನಿಷ್ಠ 239 ರೂಪಾಯಿ ಯೋಜನೆಗೆ ರೀಚಾರ್ಜ್ ಮಾಡಬೇಕು ಎನ್ನಲಾಗಿದೆ.
ಜಿಯೋ ಬಳಕೆದಾರರು ತಮ್ಮಲ್ಲಿರುವ ಸಿಮ್ ಕಾರ್ಡ್ ಅಥವಾ ಮೊಬೈಲ್ ಚೇಂಜ್ ಮಾಡದೇ 5ಜಿ ನೆಟ್ವರ್ಕ್ ಬಳಸಬಹುದಂತೆ. ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ. ಬದಲಾಗಿ MyJio ಅಪ್ಲಿಕೇಶನ್ ಮೂಲಕ ಜಿಯೋದ 5G ಸೇವೆಯನ್ನು ಪಡೆಯುವಂತೆ ಆಹ್ವಾನವನ್ನು ಕಳುಹಿಸುತ್ತದೆಯಂತೆ.
ಸದ್ಯ ಈ ಪ್ರಾಯೋಗಿಕ ಸೇವೆ ದೇಶದಲ್ಲಿ ಮೊದಲು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿ ಪ್ರಾರಂಭ ಆಗಿದ್ದು, ಇದನ್ನು ಜನ ಯಾವ ರೀತಿ ಉಪಯೋಗಿಸುತ್ತಾರೆ ಹಾಗೂ ಇದರ ಸೇವೆ ಹೇಗಿರುತ್ತೆ ಅನ್ನೋದರ ಮೇಲೆ ದೇಶಾದ್ಯಂತ ಸೇವೆ ಆರಂಭಿಸಲಾಗುತ್ತದೆ.