ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…?
ಇದು ಕ್ಯಾಲರಿ ಕಡಿಮೆ ಇದ್ದು ಹೇರಳವಾಗಿ ಪೋಷಕಾಂಶಗಳಿರುವ ಒಂದು ತರಕಾರಿ. ವಯಸ್ಸಾಗುತ್ತಲೇ ಮುಖದ ಮೇಲೆ ಮೂಡುವ ನೆರಿಗೆ, ಕಣ್ಣ ಸುತ್ತಲಿನ ಕಪ್ಪು ವೃತ್ತಗಳನ್ನು ದೂರ ಮಾಡಬೇಕಾದರೆ ಕ್ಯಾಬೇಜ್ ನ ಜ್ಯೂಸ್ ಸೇವಿಸಬೇಕು. ಇದರಲ್ಲಿರುವ ವಿಟಮಿನ್ ಎ ಮತ್ತು ಚರ್ಮದಲ್ಲಿ ಇರುವ ವಿಟಮಿನ್ ಡಿ ಜತೆಯಾಗಿ ಚರ್ಮವನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ತಪ್ಪಿಸುತ್ತದೆ.
ಇದು ತ್ವಚೆಯ ಕಲ್ಮಶಗಳನ್ನು ದೂರಮಾಡಿ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಕ್ಯಾಬೇಜ್ ನಲ್ಲಿರುವ ಪೊಟಾಷಿಯಂ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
ಬಿಸಿಲಿಗೆ ಮತ್ತು ಇತರ ಕಾರಣಗಳಿಂದ ಚರ್ಮ ಒಡೆಯುವುದನ್ನು, ಒಣಗುವುದನ್ನು ತಪ್ಪಿಸುತ್ತದೆ.