alex Certify ಸೌದಿಯಲ್ಲಿ ವಿಶ್ವದ ಮೊದಲ ಹಾರುವ ಡಿಲೆವರಿ ಬಾಯ್: ಹೊಸ ಟೆಕ್ನಾಲಾಜಿ ನೋಡಿ ನೆಟ್ಟಿಗರು ಫುಲ್ ಶಾಕ್. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌದಿಯಲ್ಲಿ ವಿಶ್ವದ ಮೊದಲ ಹಾರುವ ಡಿಲೆವರಿ ಬಾಯ್: ಹೊಸ ಟೆಕ್ನಾಲಾಜಿ ನೋಡಿ ನೆಟ್ಟಿಗರು ಫುಲ್ ಶಾಕ್.

ಬ್ಯೂಸಿ ಲೈಫ್‌ನಲ್ಲಿ ಏನಾದರೂ ರುಚಿರುಚಿಯಾಗಿರೋದು ತಿನ್ನಬೇಕು ಅನ್ಸಿದ್ರೆ, ತಕ್ಷಣವೇ ಎಲ್ಲರೂ ಮಾಡೋ ಮೊದಲ ಕೆಲಸ ಅಂದ್ರೆ ಆನ್‌ಲೈನ್‌ನಲ್ಲಿ ಥಟ್‌ ಅಂತ ತಮಗೆ ಬೇಕಾಗಿದ್ದನ್ನ ಆರ್ಡರ್‌ ಮಾಡಿ ಬಿಡ್ತಾರೆ. ಈ ರೀತಿಯ ಲೈಫ್‌ಸ್ಟೈಲ್‌ಗೆ ಈಗ ಜನ ಒಗ್ಗಿಕೊಂಡು ಬಿಟ್ಟಿದ್ದಾರೆ. ಇದಕ್ಕಂತಾನೇ ಕಂಪನಿಗಳು ಹೊಸ ಹೊಸ ಮಾರ್ಗಗಳನ್ನ ಹುಡುಕ್ತಾ ಇರ್ತಾರೆ. ಅವರ ಉದ್ದೇಶ ಆರ್ಡರ್‌ ಮಾಡಿರುವ ಗ್ರಾಹಕರಿಗೆ, ಉತ್ತಮ ಗುಣಮಟ್ಟದ ಆಹಾರ ಆದಷ್ಟು ಬೇಗ ತಲುಪಿಸಬೇಕು ಅನ್ನುವುದು.

ಇದೇ ವಿಚಾರದಲ್ಲಿ ಸೌದಿ ಅರೇಬಿಯಾದಲ್ಲಿ, ಒಂದು ವಿಭಿನ್ನ ರೀತಿಯ ಪ್ರಯತ್ನ ಮಾಡಲಾಗಿದೆ. ಇಲ್ಲಿ ಈಗ ಡೆಲಿವರಿ ಬಾಯ್ ಸೂಪರ್‌ ಮ್ಯಾನ್‌ನಂತೆ ಗಾಳಿಯಲ್ಲೇ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಬಂದು ಆರ್ಡರ್‌ ಮಾಡಿರುವ ಗ್ರಾಹಕನಿಗೆ ಆಹಾರ ತಲುಪಿಸಲಿದ್ದಾರೆ. ಈಗ ಅದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋದಲ್ಲಿ ವಿಡಿಯೊದಲ್ಲಿ, ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಲು ಜೆಟ್‌ಪ್ಯಾಕ್‌ನಲ್ಲಿ ಹಾರುತ್ತಿರುವುದನ್ನು ಗಮನಿಸಬಹುದು. ಈ ರೀತಿಯ ಪ್ರಯತ್ನ ಇದೇ ಮೊದಲ ಬಾರಿ ನಡೆದಿದ್ದು, ಇದು ಭಾರೀ ಮೆಚ್ಚುಗೆ ಗಳಿಸಿದೆ. ಈ ವಿಡಿಯೊವನ್ನು ಡೈಲಿ ಲೌಡ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ. ಈ ವೀಡಿಯೊವನ್ನ ಈಗಾಗಲೇ 4 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ವಿತರಣಾ ವ್ಯಕ್ತಿ ಆಹಾರವನ್ನು ತಲುಪಿಸಲು ಬಹುಮಹಡಿ ಕಟ್ಟಡಕ್ಕೆ ಹಾರುತ್ತಿರುವುದನ್ನು ನೋಡಿ ನೆಟ್ಟಿಗರು ರೋಮಾಂಚನಗೊಂಡಿದ್ದಾರೆ.

ಡೆಲಿವರಿ ಏಜೆಂಟ್ ಜೆಟ್‌ಪ್ಯಾಕ್ ಧರಿಸಿ ಕಟ್ಟಡಕ್ಕೆ ಹಾರುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್ ಹಾಗೂ ಇತರೆ ಸುರಕ್ಷತಾ ಪರಿಕರಗಳನ್ನು ಧರಿಸಿದ್ದಾನೆ. ಅವರು ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಎತ್ತರದಲ್ಲಿ ಆಹಾರವನ್ನು ತಲುಪಿಸುತ್ತಿದ್ದಾರೆ. ಏಜೆಂಟ್ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸರಕುಗಳನ್ನು ತಲುಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡಿದ ಜನರು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...