alex Certify ಆರ್ಥಿಕ ಸಮಸ್ಯೆ ಬಗ್ಗೆ ಮುನ್ಸೂಚನೆ ನೀಡುತ್ತೆ ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಮಸ್ಯೆ ಬಗ್ಗೆ ಮುನ್ಸೂಚನೆ ನೀಡುತ್ತೆ ಈ ಘಟನೆ

vastu and astrological reason behind poverty know how to get blessings of maa laxmi ji | ನೀವು ಎಷ್ಟೆ ದುಡಿದರು ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತಿಲ್ಲವೆ? ಇದಕ್ಕೆ ಕಾರಣ ಲಕ್ಷ್ಮೀದೇವಿಯ ...

ಭವಿಷ್ಯ ತಿಳಿಯೋದು ಕಷ್ಟ. ಮುಂದೇನಾಗುತ್ತೆ ಎಂಬ ಬಗ್ಗೆ ಸ್ಪಷ್ಟವಾಗಿ ಯಾರೂ ಹೇಳೋದಿಲ್ಲ. ಆದ್ರೆ ನಮ್ಮ ಸುತ್ತಮುತ್ತ ಸಂಭವಿಸುವ ಕೆಲವು ಘಟನೆಗಳು ಮುನ್ಸೂಚನೆ ನೀಡುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಈ ಬಗ್ಗೆ ನಿಮಗೆ ತಿಳಿಯುತ್ತದೆ.  ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ ಎನ್ನುವುದನ್ನು ಕೆಲವು ಸಂಕೇತಗಳಿಂದ ತಿಳಿದುಕೊಳ್ಳಬಹುದು.

ಮನೆಯ ನಲ್ಲಿ ಅಥವಾ ಇಲೆಕ್ಟ್ರಾನಿಕ್ಸ್ ಉಪಕರಣಗಳು ಹಾಳಾಗಿವೆ ಎಂದಾದಲ್ಲಿ ಸದ್ಯದಲ್ಲಿಯೇ ನೀವು ಆರ್ಥಿಕ ಸಮಸ್ಯೆ ಎದುರಿಸಲಿದ್ದೀರಿ ಎಂದರ್ಥ.

ದಂಪತಿ ನಡುವೆ ಎಂದಿಗಿಂತ ಹೆಚ್ಚು ಗಲಾಟೆ-ಜಗಳವಾಗ್ತಿದೆ ಎಂದ್ರೆ ಎಚ್ಚೆತ್ತುಕೊಳ್ಳಿ. ಸದ್ಯದಲ್ಲಿಯೇ ಆರ್ಥಿಕ ನಷ್ಟ ಅನುಭವಿಸಲಿದ್ದೀರಿ ಎನ್ನುವ ಸೂಚನೆ ಇದು.

ದೊಡ್ಡ ಅವಕಾಶವೊಂದು ಕೈತಪ್ಪಿದೆ ಎಂದಾದಲ್ಲಿ ನಾವು ಅದೃಷ್ಟ ಸರಿಯಿಲ್ಲ ಎಂದು ಸುಮ್ಮನಾಗ್ತೇವೆ. ಆದ್ರೆ ಇದು ಮುಂದೆ ಬರುವ ಸಂಕಷ್ಟಕ್ಕೆ ಮುನ್ಸೂಚನೆ ನೀಡುತ್ತದೆ. ಇದು ಮುಂದಿನ ದಿನಗಳಲ್ಲಿ ಹಣದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಠಾತ್ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ಅದು ಧನ ಹಾನಿಯ ಸಂಕೇತ.

ಯಾವುದೇ ಕಾರಣವಿಲ್ಲದೆ ಸಾಕು ಪ್ರಾಣಿಗಳು ಸಾವನ್ನಪ್ಪಿದಲ್ಲಿ ಇದು ಕೂಡ ಶುಭ ಸಂಕೇತವಲ್ಲ.

ನೀರಿನ ಟ್ಯಾಂಕ್ ಸೋರುತ್ತಿದ್ದರೆ ಆರ್ಥಿಕ ಸಮಸ್ಯೆ ನಿಶ್ಚಿತ ಎಂದರ್ಥ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...