ಶಿವಮೊಗ್ಗ: ಮಾಜಿ ಸಿಎಂ ಬಂಗಾರಪ್ಪ ಪುತ್ರರ ನಡುವೆ ಮತ್ತೆ ವಾಗ್ಯುದ್ಧ ಆರಂಭವಾಗಿದೆ. ಸಹೋದರ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಮುಂದಿನ ದಿನಗಳಲ್ಲಿ ಮಧು ಬಂಗಾರಪ್ಪ ಅವರಿಗೂ ಐಟಿ, ಇಡಿ ನೋಟೀಸ್ ನೀಡಿದರೂ ಅಚ್ಚರಿಯಿಲ್ಲ. ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧು ಅವರಿಗೂ ನೋಟೀಸ್ ಕೊಡುವ ಸಾಧ್ಯತೆ ಇದೆ ಎಂದಿದ್ದಾರೆ.
ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. 101% ಅವರು ಹೆಚ್ಚುದಿನ ಕಾಂಗ್ರೆಸ್ ನಲ್ಲಿಯೂ ಇರಲ್ಲ. ಮುಂದಿನ ಚುನಾವಣೆಗೆ ಮತ್ತೆ ಯಾವ ಪಕ್ಷ ಎಂದು ಹುಡುಕುತ್ತಾರೆ. ಹಿಂದೆ ಮಧು ಶಾಸಕರಾಗಿದ್ದಾಗ ಬಗರ್ ಹುಕುಂನಲ್ಲಿ ಅಕ್ರಮ ನಡೆದಿತ್ತು. ಶರಾವತಿ ಡೆಂಟಲ್ ಕಾಲೇಜು ಹಗರಣದಲ್ಲಿ ಭಾಗಿಯಾಗಿದ್ದಾರೆ. ಸಮಾಜವಾದಿ, ಜೆಡಿಎಸ್ ಪಾರ್ಟಿ ಫಂಡ್ ನಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.