ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ ನಾರಾಯಣರ ಅನುಗ್ರಹ ಪಡೆಯಲು ದೀಪಾವಳಿ ಹಬ್ಬದ ಒಳಗೆ ಈ ಅದೃಷ್ಟ ತರುವಂತಹ ವಸ್ತುಗಳನ್ನು ಮನೆಗೆ ತನ್ನಿ.
ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೊವನ್ನು ದೀಪಾವಳಿಯೊಳಗೆ ಮನೆಗೆ ತಂದು ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡಿ. ಇದರಿಂದ ಹಣದ ರಕ್ಷಣೆ ಆಂಜನೇಯ ಸ್ವಾಮಿ ಮಾಡುತ್ತಾರಂತೆ.
ಹಾಗೇ ದೀಪಾವಳಿಯೊಳಗೆ ವಾಸ್ತು ಪುರುಷ ದೇವನ ಫೋಟೊ ತಂದು ಮನೆಯಲ್ಲಿ ಹಾಕುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗಿ ಲಕ್ಷ್ಮೀದೇವಿ ಮನೆಗೆ ಪ್ರವೇಶಿಸುತ್ತಾಳಂತೆ.
ಲಕ್ಷ್ಮೀ ದೇವಿ ಸಮುದ್ರದಿಂದ ಹುಟ್ಟಿದ ಕಾರಣ ಆಕೆಗೆ ಸಮುದ್ರದ ವಸ್ತುಗಳು ಬಹಳ ಪ್ರಿಯ. ಆದ ಕಾರಣ ದೀಪಾವಳಿ ಹಬ್ಬದೊಳಗೆ ಸಮುದ್ರದಲ್ಲಿ ಸಿಗುವ ಶಂಖ, ಆಮೆ ಮೂರ್ತಿ, ಉಪ್ಪು ಮುಂತಾದ ವಸ್ತುಗಳನ್ನು ಮನೆಗೆ ತನ್ನಿ. ಇದರಿಂದ ದೀಪಾವಳಿ ಹಬ್ಬದಂದು ಲಕ್ಷ್ಮೀ ಮನೆಗೆ ಬರುತ್ತಾಳೆ.