ಧಾರವಾಡ: ಸೇನಾ ನೇಮಕಾತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ವೇಳೆ ಓಡುವಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಧಾರವಾಡ ಜಿಲ್ಲೆ ಆಳ್ನಾವರ ತಾಲೂಕಿನ ಅರ್ಲವಾಡ ಗ್ರಾಮದ ದರ್ಶನ್(24) ಮೃತಪಟ್ಟ ಯುವಕ. ಅಸ್ಸಾಂನಲ್ಲಿ ಸೇನಾ ನೇಮಕಾತಿ ರ್ಯಾಲಿ ಪ್ರಾರಂಭವಾಗಿದ್ದ ಹಿನ್ನೆಲೆಯಲ್ಲಿ ಸಹೋದರ ನಿರಂಜನ್ ಜೊತೆಗೆ ದರ್ಶನ್ ತೆರಳಿದ್ದರು.
ದೈಹಿಕ ಪರೀಕ್ಷೆ ವೇಳೆ ನಿಗದಿಪಡಿಸಿದ್ದ ಸಮಯಕ್ಕೆ ತಕ್ಕಂತೆ ಓಡುವ ವೇಳೆ ಒಮ್ಮೆಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಹೃದಯಾಘಾರದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದಕ್ಕಿಂತ ಮೊದಲು ನಡೆದ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದ ನಿರಂಜನ್ ಸೇನೆಗೆ ಆಯ್ಕೆಯಾಗಿದ್ದರು.