ನವದೆಹಲಿ: ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು ಸಲ್ಲಿಸಿದೆ.
ಹಿಂದಿ ಬೆಳೆಸಲು 112 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರಪತಿಗಳಿಗೆ ಸೆಪ್ಟಂಬರ್ ನಲ್ಲಿ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿದೆ.
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿದಂತೆ ಐಐಟಿಯಂತಹ ಉನ್ನತ ತಾಂತ್ರಿಕ ಸಂಸ್ಥೆಗಳಲ್ಲಿಯೂ ಇಂಗ್ಲಿಷ್ ಬದಲಿಗೆ ಹಿಂದಿ ಮಾಧ್ಯಮದಲ್ಲಿ ಬೋಧನೆ ಮಾಡಬೇಕು.
ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಬರುವವರಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.
ಕೇಂದ್ರ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬರುವವರೆಗೆ ಆದ್ಯತೆ ನೀಡಬೇಕು. ಹಿಂದೆ ಬಾರದ ನೌಕರರಿಗೆ ಎಚ್ಚರಿಕೆ ನೀಡಿ ವಾರ್ಷಿಕ ವರದಿಯಲ್ಲಿ ನಮೂದಿಸಬೇಕು. ಹಿಂದಿಯಲ್ಲಿ ಹೈಕೋರ್ಟ್ ಕಲಾಪ ನಡೆಸಬೇಕು. ಎಲ್ಲ ಪತ್ರ ವ್ಯವಹಾರಗಳು ಹಿಂದಿಯಲ್ಲಿ ನಡೆಯಬೇಕು. ಶೇಕಡ 50ರಷ್ಟು ಜಾಹೀರಾತಿನ ಹಣವನ್ನು ಹಿಂದಿಯಲ್ಲಿ ನೀಡಲು ಮೀಸಲಿಡಬೇಕು ಎಂದು ಹೇಳಲಾಗಿದೆ.