ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದಲ್ಲಿ ಕಳ್ಳತನ ನಡೆದಿದ್ದು, ಹಣ ಚಿನ್ನಾಭರಣ, ದಾಖಲೆ ಪತ್ರಗಳನ್ನು ಬಿಟ್ಟು ಬರಿ ಫೋಟೋಗಳನ್ನು ಹುಡುಕಿ ಹುಡುಕಿ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಮುರುಘಾ ಮಠದ ರಾಜಾಂಗಣದ ಗೋಡೆಗೆ ಹಾಕಲಾಗಿದ್ದ 47 ಫೋಟೋಗಳನ್ನು ಕಳ್ಳರು ಕದ್ದಿದ್ದಾರೆ. ಇಬ್ಬರು ಕಳ್ಳರು ಫೋಟೋಗಳನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ವಿವಿಧ ಗಣ್ಯರ ಜೊತೆ ಮುರುಘಾ ಶ್ರೀಗಳು ಇರುವ ಫೋಟೋಗಳನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಲವು ಮುಖ್ಯಮಂತ್ರಿಗಳ ಜೊತೆಗೆ ಮುರುಘಾ ಶ್ರೀಗಳಿರುವ ಫೋಟೋಗಳನ್ನು ಹಾಗೂ ಮಠದ ಗೋಡೆಗೆ ಹಾಕಿದ್ದ ಮುರುಘಾ ಶ್ರೀಗಳ ಇತರ ಫೋಟೋಗಳು ಕಳ್ಳತನವಾಗಿವೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.