ನಾಯಿ ಮತ್ತು ಮನುಷ್ಯರ ನಡುವೆ ಗಾಢ ಸ್ನೇಹವಿದೆ ಎಂಬುದಕ್ಕೆ ಅನೇಕ ಉದಾಹರಣೆ ಇದೆ. ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಸಹ ಕರೆಯಲಾಗುತ್ತದೆ. ಅನೇಕ ಬಾರಿ ತನ್ನ ಮಾಲೀಕನ ಸೂಚನೆಗಳನ್ನು ನಾಯಿಗಳು ಫಾಲೋ ಮಾಡುವುದುಂಟು.
ಇತ್ತೀಚೆಗೆ, ಸಾಕು ನಾಯಿಯೊಂದು ಕಾಲಿಗೆ ಗಾಯಗೊಂಡಿರುವ ತನ್ನ ಮಾಲೀಕರನ್ನು ಅನುಸರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಆರ್ಪಿಜಿ ಎಂಟರ್ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಮೂಲತಃ ಟಾಮ್ ಫ್ರಾನ್ಸಿಸ್ ಹಂಚಿಕೊಂಡಿದ್ದಾರೆ.
ಒಬ್ಬ ವ್ಯಕ್ತಿಯು ತನ್ನ ಬಲಗಾಲಿಗೆ ಪ್ಲ್ಯಾಸ್ಟೆಡ್ ಆಗಿರುವಂತೆ ಕಾಣಿಸಿದ್ದು, ಆತ ಊರುಗೋಲುಗಳ ಸಹಾಯದಿಂದ ಕುಂಟುತ್ತಾ ಸಾಗುವಾಗ ನಾಯಿಯ ಪಕ್ಕದಲ್ಲಿ ಸಾಗಿ ಬರುವುದು ಕಾಣಿಸುತ್ತದೆ.
ಅಚ್ಚರಿ ಎಂದರೆ ಆ ನಾಯಿ ತನ್ನ ಮಾಲೀಕನನ್ನು ಅನುಕರಿಸುತ್ತದೆ. ಆತ ಕುಂಟುತ್ತಾ ಒಂದು ಕಾಲಿನ ಸಹಾಯದಿಂದ ಹೆಜ್ಜೆ ಹಾಕುವಾಗ ನಾಯಿ ಸಹ ತಾನೂ ಒಂಟಿ ಕಾಲಿನಲ್ಲಿ ಜೊತೆಜೊತೆಗೆ ಸಾಗಿ ಬರುತ್ತದೆ.
“ನಾಯಿಗಳು ಯಾವಾಗಲೂ ತಮ್ಮ ಯಜಮಾನನನ್ನು ಅನುಸರಿಸುತ್ತವೆ…” ಎಂದು ವಿಡಿಯೋಗೆ ಶೀರ್ಷಿಕೆ ಇದೆ.
ವೀಡಿಯೊವನ್ನು ಅಪ್ಲೋಡ್ ಮಾಡಿದ ನಂತರ 9.4 ಮಿಲಿಯನ್ ವೀಕ್ಷಣೆಯಾಗಿದೆ.