ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು 5ಜಿ ಸೇವೆಗೆ ಚಾಲನೆ ನೀಡಿದ್ದು, ಇದರಿಂದ ಗ್ರಾಹಕರಿಗೆ ಅತಿ ವೇಗದ ಇಂಟರ್ನೆಟ್ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿ ಅವರ ಟೆಲಿಕಾಂ ಕಂಪನಿ 5 ಜಿ ತರಂಗಾಂತರಗಳನ್ನು ತಮ್ಮದಾಗಿಸಿಕೊಂಡಿವೆ.
ಇದರ ಮಧ್ಯೆ ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಗುರುವಾರದಿಂದಲೇ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದ್ದು, ಪ್ರಸ್ತುತ ಇರುವ 4ಜಿ ಯೋಜನೆಗಳ ದರದಲ್ಲೇ 5ಜಿ ಸೇವೆಯನ್ನು ಗ್ರಾಹಕರು ಬಳಸಿಕೊಳ್ಳಬಹುದು.
ಏರ್ಟೆಲ್ ಗ್ರಾಹಕರು 5 ಜಿ ಮೊಬೈಲ್ ಫೋನ್ ಹೊಂದಿದ್ದರೆ ಅಂತವರು ಹಳೆಯ ಸಿಮ್ ಗೆ ತಮ್ಮ ನೆಟ್ವರ್ಕ್ ಸೆಟ್ಟಿಂಗ್ಸ್ ಅನ್ನು ಬದಲಿಸಿಕೊಳ್ಳುವ ಮೂಲಕ 5ಜಿ ಸೇವೆಯನ್ನು ಬಳಸಬಹುದು. ಪ್ರಸ್ತುತ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಣಾಸಿಯಲ್ಲಿ ಏರ್ಟೆಲ್ 5ಜಿ ಸೇವೆಯನ್ನು ನೀಡಲಾಗುತ್ತಿದೆ.