ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ ನೀಡುತ್ತದೆ. ಶಕನು ಶಾಸ್ತ್ರದಲ್ಲಿ ನಾಯಿ ನಡವಳಿಕೆ ಬಗ್ಗೆ ವಿವರವಾಗಿ ಹೇಳಲಾಗಿದೆ.
ಶಾಸ್ತ್ರಗಳ ಪ್ರಕಾರ, ನಾಯಿ ಅಚಾನಕ್ ತಲೆಯನ್ನು ನೆಲದ ಮೇಲಿಟ್ಟರೆ. ಪದೇ ಪದೇ ಇದೇ ಕೆಲಸವನ್ನು ಮಾಡಿದ್ರೆ ಈ ಜಾಗದಲ್ಲಿ ಧನ ಸಂಪತ್ತಿದೆ ಎಂದರ್ಥ.
ರೋಗದಿಂದ ಬಳಲುತ್ತಿರುವ ವ್ಯಕ್ತಿ ಮುಂದೆ ನಾಯಿ ಬಂದು ಪದೇ ಪದೇ ತನ್ನ ಬಾಲ ಅಥವಾ ಹೃದಯ ಸ್ಥಳವನ್ನು ನಾಲಿಗೆಯಿಂದ ನೆಕ್ಕಿದ್ರೆ ಶೀರ್ಘವೇ ರೋಗಿ ಸಾವನ್ನಪ್ಪುತ್ತಾನೆ ಎಂದರ್ಥ. ಬಹುಬೇಗ ಸಾವು ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಜೂಜುಕೋರನಿಗೆ ಜೂಜು ಆಡಲು ಹೋಗುವ ಮೊದಲು ನಾಯಿ ಹಸ್ತಮೈಥುನ ಮಾಡುವ ಸ್ಥಿತಿಯಲ್ಲಿ ಕಂಡ್ರೆ ಶುಭ. ಆತನಿಗೆ ಹೆಚ್ಚಿನ ಧನಲಾಭವಾಗುತ್ತದೆ ಎಂದರ್ಥ.
ಪ್ರಯಾಣಕ್ಕಿಂತ ಮೊದಲು ನಾಯಿ ಚಪ್ಪಲಿಯನ್ನು ಕಚ್ಚಿಕೊಂಡು ಹೋಗಿ ಬೇರೆ ಚಪ್ಪಲಿ ತಂದ್ರೆ ಕಳ್ಳತನವಾಗುತ್ತದೆ ಎಂದರ್ಥ. ಪ್ರವಾಸಕ್ಕೆ ಹೊರಟ ವ್ಯಕ್ತಿ ಹಣ ಕಳ್ಳರ ಪಾಲಾಗೋದು ಗ್ಯಾರಂಟಿ.